ಬೆಂಗಳೂರು : ಇಷ್ಟು ದಿನ ರೋಡ್‌ಗಳಲ್ಲಿ ಬೈಕ್ ವೀಲಿಂಗ್‌ಗಳದ್ದೇ ಸದ್ದಾಗಿತ್ತು, ಆದರೆ ಈಗ ಆಟೋದಲ್ಲಿ ಕೂಡ ವೀಲಿಂಗ್ ಮಾಡುಲು ಶುರು ಮಾಡಿರೋದು ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ತಂದಂತಾಗಿದೆ.
ಹಾಡು ಹಗಲೇ ಆಟೋದಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಿರುವ ಪುಂಡರು ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಆಟಾಟೋಪ ನಡೆಸಿದ್ದಾರೆ. ಇನ್ನು ಆಟೋದಲ್ಲಿ ಡೆಡ್ಲಿ ವೀಲಿಂಗ್ ಜೊತೆ ಸ್ಟಂಟ್ ಮಾಡೋ ಪುಂಡರು ನಂತರ ಅದನ್ನ ಪೇಸ್‌ಬುಕ್‌ಗೆ ಅಪ್ಲೋಡ್ ಮಾಡುತ್ತಾ ಶೋ ಮಾಡುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿರುವ ವೀಡಿಯೋಗಳ ಆಧಾರದ ಮೇಲೆ ವೀಲಿಂಗ್ ಮಾಡಿರುವ ಪುಂಡರಿಗಾಗಿ ಸಂಚಾರಿ ಪೊಲೀಸರ ಶೋಧಕಾರ್ಯ ಆರಂಭಿಸಿದ್ದಾರೆ.