ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಿಗ್‍ಬಾಸ್ ಸ್ಪರ್ಧಿಗಳಾದ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಇದೊಂದು ಫೋಟೋಶೂಟ್ ಎಂದು ಹೇಳಲಾಗುತ್ತಿದೆ.

ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ವಿವಿಧ ಬರಹಗಳಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ನಿಮ್ಮ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾದ್ರೆ ಚೆನ್ನಾಗಿರುತ್ತೆ ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇಬ್ಬರದ್ದೂ ನಿಶ್ಚಿತಾರ್ಥ ಆಗಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ಈ ಫೋಟೋ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಂದಿಲ್ಲ.

ಈ ಬಾರಿಯ ಬಿಗ್‍ಬಾಸ್ ಸೀಸನ್ ಮೊದಲ ಇನ್ನಿಂಗ್ಸ್ ನಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಪ್ರಣಯ ಪಕ್ಷಿಗಳಂತೆ ಬಿಂಬಿತರಾಗಿದ್ದರು. ಆದ್ರೆ ಎರಡನೇ ಇನ್ನಿಂಗ್ಸ್ ನಲ್ಲಿ ಇಬ್ಬರೂ ತಾವು ಒಳ್ಳೆಯ ಫ್ರೆಂಡ್ಸ್ ಅಂತ ಹೇಳಿಕೊಂಡು ಎಲ್ಲ ಅಂತೆಕಂತೆಗಳಿಗೆ ತೆರೆ ಎಳೆದಿದ್ದರು. ಇದನ್ನೂ ಓದಿ: ಮಳೆಯಲಿ ಕಾಫಿ ಜೊತೆಗಿರಲಿ ಗರಂ ಗರಂ ಈರುಳ್ಳಿ ಪಕೋಡ