ಬೆಂಗಳೂರು (ಸೆ.4): ರಾಜ್ಯದ ಪ್ರತಿಷ್ಟಿತ ವಾರ್ತಾಭಾರತಿ ಪತ್ರಿಕೆಗೆ ಸರ್ಕಾರ ಜಾಹಿರಾತು ನಿಲ್ಲಿಸಿರುವ ಬೆನ್ನಲ್ಲೆ, ಹಾತ್‌ವೇ ಕೇಬಲ್‌ನಿಂದ ರಾಷ್ಟ್ರದ ಪ್ರಮುಖ ಸುದ್ದಿವಾಹಿನಿ ಎನ್‌ಡಿಟಿವಿಯನ್ನು ಹಾತ್‌ವೇ ಕೇಬಲ್‌ನಿಂದ ತೆಗೆದುಹಾಕಲಾಗಿದೆ.
ಹಾತ್‌ವೇ ಕೇಬಲ್‌ನಿಂದ ಎನ್‌ಡಿಟಿವಿಯನ್ನು ಕಿತ್ತುಹಾಕಿರುವ ಬಗ್ಗೆ ಹಿರಿಯ ಪತ್ರಕರ್ತ ಮತ್ತು ಎನ್‌ಡಿಟಿವಿ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್‌ಡಿಟಿವಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿರುವ ರವೀಶ್, ವಾಹಿನಿಯನ್ನು ಮೂಲೆಗುಂಪು ಮಾಡುವ ಮತ್ತು ವಾಹಿನಿ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ತಲುಪದಂತೆ ಮಾಡುವ ಕುತಂತ್ರ ಇದಾಗಿದೆ ಎಂದು ವಿರೋಧಿಸಿದ್ದಾರೆ.
.@ndtvindia removed by @HathwayCableTV from some popular packs. Our team talking to them to resolve this. To support @ndtvindia, pls tweet @HathwayCableTV or call them : 1800 4197 900; 0120 6836401 🙏🙏
— ravish kumar (@ravishndtv) September 3, 2021
ವಿಡಿಯೋದಲ್ಲಿ ಎನ್‌ಡಿಟಿವಿ ಶ್ರಮದ ಕುರಿತು ವಿವರಿಸಿರುವ ರವೀಶ್ ಕುಮಾರ್, ಎನ್‌ಡಿಟಿವಿ ತಂಡ ಪ್ರೇಕ್ಷಕರಿಗಾಗಿ ಪ್ರೈಮ್‌ಟೈಮ್ ಶೋ ರೂಪಿಸಲು ಅವಿರತವಾಗಿ ಶ್ರಮಿಸುತ್ತಿದೆ. ಈ ರೀತಿಯ ಹೇರಿಕೆಯಿಂದಾಗಿ ಕಾರ್ಯಕ್ರಮಗಳು ಜನರಿಗೆ ತಲುಪದಿದ್ದರೆ ಕಷ್ಟವಾಗುತ್ತದೆ. ಇಂದಿನ ಕಾರ್ಯಕ್ರಮ ವೀಕ್ಷಕರನ್ನು ತಲುಪುವುದಿಲ್ಲ. ಆದರೂ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ನೋಡಲು ಯೋಗ್ಯವಾದ ಕಾರ್ಯಕ್ರಮ ಇದೆಂದು ಇತಿಹಾಸ ನೆನಪಿಡುತ್ತದೆ ಎಂದು ರವೀಶ್ ಕುಮಾರ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ದಾಖಲೆ ಮಾಡಿದ ಭಾರತದ ಶೂಟರ್‌ಗಳು: ಮನೀಶ್‌ಗೆ ಚಿನ್ನ, ಸಿಂಗರಾಜ್‌ಗೆ ಬೆಳ್ಳಿ ಪದಕ https://seculartvkannada.com/?p=5139
ತಮ್ಮ ತಂಡದ ಪ್ರಯತ್ನಗಳಿಂದ ಎಂದಿಗೂ ಧೈರ್ಯ ಕಳೆದುಕೊಳ್ಳುವುದಿಲ್ಲ ಹಾತ್‌ವೇ ಕೇಬಲ್ ಕಂಪನಿಯ ವಿರುದ್ಧ ಸಿಡಿದೇಳಬೇಕು ಎಂದು ಜನರಿಗೆ ಕರೆ ನೀಡಿರುವ ಅವರು, ಟಿವಿ ಕೇಬಲ್ ನಿರ್ವಹಣೆ ಮಾಡುವ ಹಾತ್ ವೇ ಕೇಬಲ್ ಹಾಗೂ ಡೇಟಾಕಾಮ್ ಯಾಕೆ ಈ ಕ್ರಮ ಕೈಗೊಂಡಿದೆ ಎಂದು ಗ್ರಾಹಕರ ಸೇವಾ ನಂಬರ್‌ಗೆ (೧೮೦೦ ೪೧೯೭ ೯೦೦/ ೦೧೨೦ ೬೮೩೬೪೦೧) ಕರೆ ಮಾಡಿ ಮತ್ತು ಕಂಪನಿಯ ಅಧಿಕೃತ ಹ್ಯಾಂಡಲ್ ಟ್ಯಾಗ್ ಮಾಡಿ ಎನ್‌ಡಿಟವಿಯನ್ನು ತನ್ನ ಜಾಲದಲ್ಲಿ ಪುನಸ್ಥಾಪಿಸುವಂತೆ ಟ್ವೀಟ್ ಮಾಡಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಕಾರಣ ಏನು..?https://youtu.be/yOggLtgGS04
ಈ ಬಗ್ಗೆ ಟ್ವೀಟರ್‌ನಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಗೋದಿ ಮೀಡಿಯಾ ಹಾಗೂ ಗೋದಿ ಸರ್ಕಾರ ಪಿತೂರಿ ಇದು ಎಂದು ಹರಿಹಾಯ್ದಿದ್ದಾರೆ. ಮತ್ತೆ ಕೆಲವರು ವಾಹಿನಿಯನ್ನು ಮೆಮೆಗಳ ಮೂಲಕ ಹೀಯಾಳಿಸಿದ್ದಾರೆ.