ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ದಾಖಲೆ ಮಾಡಿದ್ದು, ಇಂದು ನಡೆದ ಶೂಟಿಂಗ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದೆ. ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಭಾರತದ ಮತ್ತೊರ್ವ ಶೂಟರ್ ಅಧನ ಸಿಂಗರಾಜ್ 218.2 ಅಂಕಗಳೊಂದಿಗೆ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
We can't stop staring at these breathtaking pictures from the Victory Ceremony of #ManishNarwal & @AdhanaSinghraj 🇮🇳🇮🇳🥇🥈🤩🥲🎉🎉 #Praise4Para #ProudParalympian #ParalympicsTokyo2020 #shootingparasport https://t.co/JrXXD1IYjc
— Paralympic India 🇮🇳 #Cheer4India 🏅 #Praise4Para (@ParalympicIndia) September 4, 2021
ಆ ಮೂಲಕ ಒಂದೇ ಪೈನಲ್ ಪಂದ್ಯದಲ್ಲಿ ಉಭಯ ಆಟಗಾರರು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ನಲ್ಲಿ ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಮನೀಶ್ 533-7x ಮತ್ತು ಸಿಂಗರಾಜ್ 536-4x ಅಂಕಗಳೊಂದಿಗೆ ಫೈನಲ್ ಗೇರಿದ್ದರು. ಈ ಪದಕಗಳ ಮೂಲಕ ಹಾಲಿ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಚಿನ್ನ 3, ಬೆಳ್ಳಿ 7 ಮತ್ತು 5 ಕಂಚಿನ ಪದಕಗಳು ಸೇರಿವೆ.
Congratulations Manish Narwal for winning Gold medal 🥇… ##shooting #TokyoParalympics pic.twitter.com/3tVeUeL9XI
— Saina Nehwal (@NSaina) September 4, 2021