ಕೋಲಾರ (ಸೆ.೪): ಯುವತಿಯರನ್ನ ಚುಡಾಯಿಸಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಲ್ಲೆ ಯುವಕರಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದ ಬಳಿ ಘಟನೆ ನಡೆದಿದೆ. ತಾಲೂಕಿನ ತಾಡಿಗೋಳ್ ಗ್ರಾಮದ ಯುವತಿಯರನ್ನ ಬಾಬು ಹಾಗೂ ಮತ್ತೊಬ್ಬ ಯುವಕ ಸೇರಿಕೊಂಡು ಚುಡಾಯಿಸಿದ್ರು, ಮೊದಲಿಗೆ ಚುಡಾಯಿಸಬೇಡಿ ಎಂದು ಎಚ್ಚರಿಕೆ ನೀಡಿದ್ರೂ ಕೂಡ ಚುಡಾಯಿಸುವದನ್ನ ಬಿಡದ ಯುವಕ, ಮತ್ತೊಮ್ಮೆ ಚುಡಾಯಿಸಿದ್ದಕ್ಕೆ ಬಾಬು ಎನ್ನುವ ಯುವಕನಿಗೆ ಮನಬಂದಂತೆ ಯುವಕರ ಗುಂಪಿನಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಬಾಬು, ಯುವತಿಯರ ಹಿಂಬದಿಯ ಸೀಟ್‌ನಲ್ಲಿ ಕುಳಿತಿದ್ದ ಈ ವೇಳೆ ಯುವತಿಯರನ್ನ ಚುಡಾಹಿಸಿದ್ದಾರೆ. ಘರ್ಷಣೆಯಲ್ಲಿ ಓರ್ವ ಯುವತಿ ಹಾಗು ಯುವಕನಿಗು ಯುವಕರು ಹೊಡೆದಿರುವ ಆರೋಪ ಕೇಳಿ ಬರ್ತಿದೆ. ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರ ಪಟ್ಟಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ನಡೆದಿರೊ ಘಟನೆ ಇದಾಗಿದ್ದು ಘಟನೆಯ ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಹಾಗಿದೆ.