ದಾವಣಗೆರೆ : ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದಿನಾಂಕ 2-9-2021 ರಂದು ಮಧ್ಯಾಹ್ನ ದಾವಣಗೆರೆಯ ಜಿ.ಎಂ.ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯ ಮೂವರು ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಬಿ ಎಂ ಶಿವಲಿಂಗಸ್ವಾಮಿ, ಶ್ರೀ ಎಚ್. ಮರುಳಸಿದ್ದಪ್ಪ, ಶ್ರೀ ತಿರುವಳ್ಳಿ ಶೆಟ್ರ ಸಿದ್ದರಾಮಪ್ಪ ಅವರನ್ನು ಸನ್ಮಾನಿಸಿದರು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಶ್ರೀ ಬಿ.ಎ.ಬಸವರಾಜ (ಬೈರತಿ), ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ ನಿರಾಣಿ, ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ, ಕೃಷಿ ಸಚಿವರಾದ ಶ್ರೀ ಬಿ ಸಿ ಪಾಟೀಲ್, ಶಾಸಕರಾದ ಶ್ರೀ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.