ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಆಚರಣೆ ಹೇಗಿರಬೇಕು ಎನ್ನುವ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವ ಸಿದ್ದತಾ ಸಭೆ ಇಂದು ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ ಅವರು ಅಕ್ಟೋಬರ್ ೭ ರಂದು ದಸರಾ ಉದ್ಘಾಟನೆ ನಡೆಯಲಿದೆ.. ಅಕ್ಟೋಬರ್ ೧೫ ರಂದು ಮಧ್ಯಾಹ್ನ ಜಂಬೂ ಸವಾರಿ ನಡೆಯಲಿದೆ ಎಂದರು.
ಕಳೆದ ಬಾರಿ ಅರಮನೆ ಮೈದಾನದೊಳಗೇ ಜಂಬೂ ಸವಾರಿ ಮಾಡಲಾಗಿತ್ತು.. ಈ ಬಾರಿಯೂ ಅರಮನೆ ಆವರಣದೊಳಗೇ ಜಂಬೂ ಸವಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದರು..
ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಎಸ್ ಟಿ ಸೋಮಶೇಖರ್ ನಾವು ದಸರಾ ಆಚರಣೆಗೆ 5 ಕೋಟಿ ಕೇಳಿದ್ದೆವು. ಸಿಎಂ 1 ಕೋಟಿ ಹೆಚ್ಚುವರಿ ಸೇರಿಸಿ 6 ಕೋಟಿ ಕೊಡಲು ಒಪ್ಪಿದ್ದಾರೆ.. ಕಳೆದ ಯಾವುದಕ್ಕೆಲ್ಲ ಅವಕಾಶ ಇತ್ತೋ ಅದರ ದುಪ್ಪಟ್ಟು ಅವಕಾಶ ಕೊಡಲು ಮನವಿ ಮಾಡಿದ್ದೇವೆ ಎಂದ್ರು.. ಇದೇ ಸಂಬಂಧ 15 ರ ಬಳಿಕ ಮತ್ತೊಂದು ಸಭೆ ಮಾಡಿ ನಿರ್ಧರಿಸೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು..
ಇದನ್ನೂ ಓದಿ : https://seculartvkannada.com/2021/09/03/tokiyo-olympians-from-karnataka-state-are-honored-by-karnataka-cm/
ದಸರಾಗೆ ವ್ವಸ್ಥಿತವಾಗಿ ದೀಪಾಲಂಕಾರವೂ ಮಾಡಲು ನಿರ್ಧರಿಸಲಾಗಿದೆ. 9 ದಿನ ಕೂಡ ಕಾರ್ಯಕ್ರಮ ನಡೆಯಲಿದ್ದು, ಮೈಸೂರಿನವ್ರಿಗೇ ಕಾರ್ಯಕ್ರಮಗಳನ್ನು ಕೊಡಲು ನಿರ್ಧರಿಸಲಾಗಿದೆ.. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಕಾರ್ಯಕ್ರಮ ನಡೆಯಲಿದ್ದು, ಚೆಸ್ಕಾಂನಿಂದ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತೆ ಎಂದರು.
ಇದನ್ನೂ ಓದಿ : https://seculartvkannada.com/?p=5081
ಇನ್ನೂ ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಸಚಿವರಾದ ಆರ್ ಅಶೋಕ್, ಎಸ್ ಟಿ ಸೋಮಶೇಖರ್, ಡಾ ಕೆ ಸುಧಾಕರ್ ಸೇರಿದಂತೆ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ರು..