ಜಪಾನ್‌ನಲ್ಲಿ ನೊಮುರಾ ಹೋಲ್ಡಿಂಗ್ಸ್ ಕಂಪನಿ ತನ್ನ ಸಿಬ್ಬಂದಿಗಳಿಗೆ ಕೆಲಸದ ಸಮಯದಲ್ಲಿ ಹಾಗೂ ಮನೆಯಿಂದ ಕೆಲಸ ಮಾಡುವವರು ಕೂಡ ಧೂಮಪಾನ ಮಾಡಬಾರದೆಂದು ಹೊಸ ನಿಯಮವನ್ನು ಜಾರಿತಂದಿದೆ. ಈ ನಿಯಮ ಅಕ್ಟೋಬರ್‌ನಲ್ಲಿ ಜಾರಿಗೆ ಬರಲಿದೆ. ಈ ಕಂಪನಿಯು ಎಲ್ಲಾ ಧೂಮಪಾನ ಕೊಠಡಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಮುಚ್ಚಲಿದೆ ಎಂದು ವಕ್ತಾರ ಯೋಷಿತಕ ಒಟ್ಸು (Yoshitaka Otsu) ಹೇಳಿದ್ದಾರೆ. ನಿಯಮಗಳು ಪರಸ್ಪರ ನಂಬಿಕೆಯನ್ನು ಆಧರಿಸಿರುತ್ತದೆ ಮತ್ತು ಯಾವುದೇ ರೀತಿಯ ದಂಡನಾತ್ಮಕ ಷರತ್ತುಗಳು ಅನ್ವಯಿಸುವುದಿಲ್ಲ. ಸಂಸ್ಥೆಯಲ್ಲಿ ಒಳ್ಳೆಯ ವಾತಾವರಣ ಹಾಗೂ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗಾಗಿ ಈ ನಿಯಮವನ್ನು ಜಾರಿ ತಂದಿದೆ.

“ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಮತ್ತು ಉದ್ಯೋಗಿಗಳು ತಮ್ಮ ಸಾಮರ್ಥ್ಯ, ಪಾತ್ರಗಳನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಉತ್ಸಾಹದಿಂದ ಬದುಕುವಂತಹ ವಾತಾವರಣ ಇರಬೇಕು” ಎಂಬುದು ಸಂಸ್ಥೆಯ ಉದ್ದೇಶವಾಗಿದೆ.
ಮನೆಯಲ್ಲೇ ಧೂಮಪಾನ
ಧೂಮಪಾನದ ವಿರುದ್ಧ ಕ್ರಮ ಕೈಗೊಳ್ಳಲು ನೊಮುರಾ ಸಂಸ್ಥೆ ಒಂದು ದಿಟ್ಟ ನಿರ್ಧಾರ ಕೈಗೊಂಡಿದ್ದು, ಧೂಮಪಾನ ಸೇವನೆಯಿಂದ ಆಗುವಂತಹ ಅಪಾಯವನ್ನು ನಿಯಂತ್ರಿಸಲು ಮುಂದಾಗಿದೆ.
ಜಪಾನ್‌ನ ನ್ಯಾಷನಲ್ ಕ್ಯಾನ್ಸರ್ ಸೆಂಟರ್ ಮಾರ್ಚ್ ಸಮೀಕ್ಷೆಯ ಪ್ರಕಾರ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಈ ಸಮಯದಲ್ಲಿ ಮನೆಯಲ್ಲೆ ಇರುವುದರಿಂದ ತಮ್ಮ ಸಿಗರೇಟ್ ಬಳಕೆ ಹೆಚ್ಚಾಗಿದೆ ಎಂದು 10ರಲ್ಲಿ ಇಬ್ಬರು ಧೂಮಪಾನಿಗಳು ಹೇಳಿದ್ದಾರೆ.

ಜಪಾನ್‌ನಲ್ಲಿನ ತನ್ನ ಉದ್ಯೋಗಿಗಳಲ್ಲಿ ಧೂಮಪಾನದ ಪ್ರಮಾಣವನ್ನು 2025ರ ವೇಳೆಗೆ 12% ಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ. ಇನ್ನು ಧೂಮಪಾನವನ್ನು ತಡೆಗಟ್ಟಲು ಊಟದ ಸಮಯದಲ್ಲಿ ಅಥವಾ ವಿರಾಮದ ಸಮಯದಲ್ಲಿ ಧೂಮಪಾನ ಮಾಡಿದ ನಂತರ 45 ನಿಮಷಗಳ ಕಾಲ ತನ್ನ ಸಂಸ್ಥೆಯಿಂದ ದೂರವಿರಲು ಶಿಫಾರಸ್ಸು ಮಾಡಿದೆ.