ಕೆನಡಾ: ಪತ್ರಕರ್ತೆ ಗೌರಿ ಲಂಕೇಶ್‌ರ ಕೊಲೆಯಾಗಿ ಸೆಪ್ಟೆಂಬರ್ 5 ಕ್ಕೆ ನಾಲ್ಕು ವರ್ಷವಾಗಲಿದೆ. ಈ ನಡುವೆ ಕೆನಡಾದ ಬರ್ನಾಬಿ ಎಂಬ ನಗರವು ಸೆಪ್ಟೆಂಬರ್ 5 ಅನ್ನು ”ಗೌರಿ ಲಂಕೇಶ್ ದಿನ” ಎಂದು ಘೋಷಣೆ ಮಾಡಿದೆ.
ಆಗಸ್ಟ್ 30 ನಡೆದ ಬರ್ನಾತ್‌ನ ನಗರ ಕೌನ್ಸಿಲ್ ಸಭೆಯಲ್ಲಿ ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ದಿನವನ್ನಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರಕ್ಕೆ ನಗರದ ಮೇಯರ್ ಮೈಕ್ ಹರ್ಲೆ ಸಹಿ ಹಾಕಿದ್ದಾರೆ. ಬಳಿಕ ಈ ನಿರ್ಧಾರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಮಾಡಲಾಗಿದೆ.
ಇದನ್ನೂ ಓದಿ : https://seculartvkannada.com/2021/09/03/covid19-3rd-wave-positive-cases-increases-in-bengaluru/
2017 ರ ಸೆಪ್ಟೆಂಬರ್ 5 ರಂದು ದುಷ್ಕರ್ಮಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತಮ್ಮ ನಿವಾಸದ ಬಳಿಯೇ ಗೌರಿ ಲಂಕೇಶ್‌ರನ್ನು ಕೊಲೆ ಮಾಡಿದ್ದರು.
ಕೆನಡಾದ ಬರ್ನಾತ್ ನಗರದ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಶ್ಲಾಘಿಸಲಾಗಿದೆ. ಇನ್ನು ನಿರ್ಧಾರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ, “ಗೌರಿ ಲಂಕೇಶ್ ತಾನು ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಓದುಗರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳು ಪ್ರೇರಣೆ ನೀಡಿದ್ದಾರೆ. ಧಾರ್ಮಿಕ ಮತಾಂಧತೆ, ಜಾತಿ ತಾರತಮ್ಯವನ್ನು ತಿರಸ್ಕಾರ ಮಾಡುವಂತೆ ಓದುಗರಿಗೆ ಪ್ರೋತ್ಸಾಹ ನೀಡಿದ್ದಾರೆ, ” ಎಂದು ತಿಳಿಸಲಾಗಿದೆ.
ಇದನ್ನೂ ಓದಿ : https://seculartvkannada.com/2021/09/03/union-minister-amith-sha-honered-freedom-fighters-at-davanagere/
ನಟ ಚೇತನ್ ಟ್ವಿಟ್:
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಚೇತನ್, “ನಮ್ಮ ಹೆಮ್ಮೆಯ ಗೌರಿ ಲಂಕೇಶ್‌ರ ಧೈರ್ಯ ಹಾಗೂ ಪರಂಪರೆಯನ್ನು ಗೌರವಿಸಲು ಕೆನಡಾದ ಬರ್ನಾತ್ ನಗರವು ಸೆಪ್ಟೆಂಬರ್ 5 ಅನ್ನು ”ಗೌರಿ ಲಂಕೇಶ್ ದಿನ’ ಎಂದು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ನಾವು ಕೆನಡಾದ ದಕ್ಷಿಣ ಏಷ್ಯಾದ ವಲಸಿಗರನ್ನು ಪ್ರಶಂಸಿಸುತ್ತೇವೆ. ಗೌರಿ ಬದುಕಿಯೇ ಇದ್ದಾರೆ ಮತ್ತು ಸಮಾನತೆಯ ಪ್ರಪಂಚಕ್ಕಾಗಿ ಹೋರಾಡಲು ನಮಗೆ ಸ್ಫೂರ್ತಿ ನೀಡುತ್ತಾರೆ” ಎಂದು ಬರೆದುಕೊಂಡಿದ್ದಾರೆ.