ಬೆಂಗಳೂರು (ಸೆ.೨): ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ನಿಬಂಧನೆ ಹೇರದಂತೆ ರಾಜ್ಯ ಸರ್ಕಾರ ಅಧಿಕೃತ ಸೂಚನೆ ನೀಡಿದೆ.. ಎಲ್ಲಾ ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೂಚನೆ ನೀಡಿದ್ದಾರೆ.

ನೋ ವಾಕ್ಸಿನ್ ನೋ ರೇಷನ್ ಎಂದು ಚಾಮರಾಜನಗರ ಡಿಸಿ ಆದೇಶಿಸಿದ್ದರು.. ಈ ಆದೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ವಿರೋಧ ಕೇಳಿಬಂದಿತ್ತು.. ವಿರೋಧ ವ್ಯಕ್ತವಾಗ್ತಿದ್ದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ವಾಪಾಸ್ ತೆಗೆದುಕೊಂಡಿದ್ದರು.
ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ಆದೇಶ ವ್ಯಾಪಕ ಟೀಕೆಗೆ ಒಳಗಾಗಿತ್ತು… ಈ ಹಿನ್ನಲೆ ಸಿ.ಎಸ್ ರವಿಕುಮಾರ್ ಎಲ್ಲರಿಗೂ ಲಸಿಕೆ ನೀಡಬೇಕು ಅನ್ನೋ ಉದ್ದೇಶದಿಂದ ಯಾವುದಾದ್ರು ಯೋಜನೆ ಜೊತೆ ಕೈ ಜೋಡಿಸಿದ್ರೆ ತಕ್ಷಣ ಕೈಬಿಡಿ ಎಂದು ಸೂಚನೆ ನೀಡಿದ್ದಾರೆ.