ಮುಂಬೈ (ಸೆ.2): ಹಿಂದಿ ಕಿರುತೆರೆಯ ಸ್ಟಾರ್ ನಟ ಸಿದ್ಧಾರ್ಥ್ ಶುಕ್ಲಾ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 40ರ ಹರೆಯದ ಸಿದ್ದಾರ್ಥ್ ಸಾವು ಬಾಲಿವುಡ್ ಮಂದಿ ಹಾಗೂ ಅಭಿಮಾನಿಗಳಿಗೆ ದಂಗು ಬಡಿಸಿದೆ. ಸಿದ್ಧಾರ್ಥ್ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಸಿದ್ದಾರ್ಥ್ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಸಿದ್ಧಾರ್ಥ್ ಶುಕ್ಲಾ 1980 ಡಿಸೆಂಬರ್ 12ರಂದು ಮುಂಬೈನಲ್ಲಿ ಜನಿಸಿದ್ದರು. ಇವರ ತಂದೆ-ತಾಯಿ ಮೂಲತಃ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು.

ಸಿದ್ಧಾರ್ಥ್ ಶುಕ್ಲಾ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. 2004 ರಲ್ಲಿ ಬಾಲಿಕಾ ವಧು ಸೀರಿಯಲ್ ಮೂಲಕ ವೀಕ್ಷಕರ ಹೃದಯ ಗೆದ್ದಿದ್ದ ಶುಕ್ಲಾ, 2008 ರಲ್ಲಿ, ‘ಬಾಬುಲ್ ಕಾ ಆಂಗನ್ ಛೋಟೆ ನಾ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ದಿಲ್ ಸೆ ದಿಲ್ ತಕ್ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯ ನಟಿ ರಶ್ಮಿ ದೇಸಾಯಿ ಜೊತೆ ಮೊದಲು ಒಳ್ಳೆಯ ಸಂಬಂಧ ಹೊಂದಿದ್ದ ನಟ, ನಂತರ ಕಿತ್ತಾಡಿಕೊಂಡು ಇಬ್ಬರು ಧಾರಾವಾಹಿಯಿಂದ ಹೊರನಡೆದಿದ್ದರು. ನಂತರ ಇಬ್ಬರು ಬಿಗ್‌ಬಾಸ್ 13ರಲ್ಲಿ ಕಾಣಿಸಿಕೊಂಡು ದೊಡ್ಡ ಸುದ್ದಿಯಾಗಿತ್ತು. ಸಿದ್ದಾರ್ಥ್ ಬಿಗ್‌ಬಾಸ್‌ನಲ್ಲಿ ಶೆಹಜಾಝ್ ಗಿಲ್ ಜೊತೆ ಸ್ನೇಹ ಬೆಳೆಸಿದ್ದರು. ಇವರಿಬ್ಬರ ಸ್ನೇಹಕ್ಕೆ ಅಭಿಮಾನಿಗಳು ‘ಸಿಡ್ನಾಜ್’ ಎಂಬ ಹೆಸರು ನೀಡಿದ್ದರು. ಬಿಗ್‌ಬಾಸ್ ೧೩ರ ವಿಜೇತರಾದ ಸಿದ್ದಾರ್ಥ್ ಶುಕ್ಲಾ ನಂತರದ ದಿನಗಳಲ್ಲಿ ಶೆಹನಾಝ್ ಜೊತೆಗೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ಪ್ರಸಾರವಾದ ಹಿಂದಿ ಡ್ಯಾನ್ಸ್ ಶೋ ಡ್ಯಾನ್ಸ್ ದಿವಾನೆಯಲ್ಲಿಯೂ ಸಿದ್ದಾರ್ಥ್ ಹಾಗೂ ಶೆಹನಾಝ್ ಗಿಲ್ ಇಬ್ಬರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಸ್ಟಾರ್ ನಟನ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ಅಗಲಿದ ನಟನಿಗೆ ಬಾಲಿವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸಹ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ.
Congress leader Rahul Gandhi condoles the death of #SiddharthShukla pic.twitter.com/HvMXFVWRuP
— Newsroom Post (@NewsroomPostCom) September 2, 2021
It's just unbelievable and shocking. You will always be remembered @sidharth_shukla. May your soul rest in peace. My heartfelt condolences to the family 😞
— Madhuri Dixit Nene (@MadhuriDixit) September 2, 2021
💔
— Rashami Desai (@TheRashamiDesai) September 2, 2021
Shocked beyond belief at this news!! This was no age to go Sidharth! May God give strength to the family 🙏#SidharthShukla
— Suniel Shetty (@SunielVShetty) September 2, 2021
Totally Numb! This is beyond shocking! Life is so unpredictable. May his soul rest in peace🙏🏻 #SiddharthShukla pic.twitter.com/OjvCBDXN94
— Sharad Kelkar (@SharadK7) September 2, 2021
Really sad to know about the passing away of #SiddharthShukla. I didn’t know him personally but it’s heartbreaking to know of such a talented life gone so soon. Om Shanti 🙏🏻
— Akshay Kumar (@akshaykumar) September 2, 2021