ಬೆಂಗಳೂರು : “GODS OWN COUNTRY” ಅಂತಲೇ ಪ್ರಸಿದ್ದವಾದ ಕೇರಳ ರಾಜ್ಯದಲ್ಲಿರುವ, ವಾಯನಾಡ್ ಜಿಲ್ಲೆಯ ಒಂದು ಪುಟ್ಟ ಹಳ್ಳಿ ಚೆನ್ನಲೋಡ್ ಇಂದು ಪ್ರಸಿದ್ದತೆಯನ್ನು ಪಡೆದಿದೆ ಎಂದರೆ ಅದಕ್ಕೆ ಮೂಲ ಕಾರಣ ಅದೇ ಊರಿನ ಬಡ ಕುಟುಂಬದಲ್ಲಿ ಜನಿಸಿದ ಮುಸ್ತಾಫಾ ಪಿ ಸಿ ( Mustafa P C ) ಯವರು. ಅವರ ತಾಯಿ ಶಾಲೆಗೆ ಹೋಗಲಿಲ್ಲ ಮತ್ತು ಅವರ ತಂದೆ ಕಾಫಿ ತೋಟದಲ್ಲಿ ಕೂಲಿಯಾಗಿದ್ದರು. ತಮ್ಮ ಬಡತನವನ್ನು ತಮ್ಮ ದುರ್ಬಲತೆಯನ್ನು ಮಾಡಿಕೊಳ್ಳದೇ ಇಂದು 238 ಕೋಟಿ ರೂಪಾಯಿಗಳ ವಹಿವಾಟು ಹೊಂದಿದ ಪ್ರಸಿದ್ದ ಐಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಳಾಗಿದ್ದರೆ. ಇವರ ಈ ರೋಚಕ ಕಥೆಯನ್ನು ಇಂದಿನ ಈ ವರದಿಯಲ್ಲಿ ನೋಡೋಣ ಬನ್ನಿ.

ಕಾಫಿ ತೋಟದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ತಮ್ಮ ತಂದೆಗೆ ಬಹಳ ಕಡಿಮೆ ಆದಾಯ ಬರುತ್ತಿತ್ತು, ಒಂದೊಂದು ದಿನ ಮೂರು ಹೊತ್ತು ಊಟ ಮಾಡುವುದು ಸಹ ನಮಗೆ ಕನಸಾಗಿತ್ತು ಎಂದು ತಮ್ಮ ಕಥೆ ಹೇಳಿಕೊಂಡ ಮುಸ್ತಾಫಾ ಪಿ ಸಿ ಯವರು ಇಂದು ಈ ಪ್ರಮಾಣದಲ್ಲಿ ಯಶಸ್ಸು ಪಡೆದಿದ್ದು ಹಲವಾರು ಯುವ ಉದ್ಯಮಿಗಳಿಗೆ ಆದರ್ಶವಾಗಿದ್ದಾರೆ. ಕಷ್ಟ ಪಟ್ಟು ಓದಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಒಂದು ಒಳ್ಳೆಯ ಎಮ್ ಎನ್ ಸಿ ಕಂಪನಿಯಲ್ಲೂ ಸಹ ಉದ್ಯೋಗ ಪಡೆದಿದ್ದರು. ಅದೊಮ್ಮೆ ಆರನೆಯ ತರಗತಿಯಲ್ಲಿ ತಾವು ಶಾಲೆ ಬಿಟ್ಟು ತಮ್ಮ ಮನೆಯವರಿಗಾಗಿ ದುಡಿಯಲು ಹೋಗಿದ್ದರು ಎಂಬ ಅಂಶವನ್ನು ಸಹ ಮುಂಬೈಯಲ್ಲಿ ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ತಾವು ಮರಳಿ ಶಾಲೆಗೆ ಸೇರಲು ಪ್ರೇರೆಪಿಸಿ ಮನವೊಲಿಸಿದ ಶಿಕ್ಷಕರೊಬ್ಬರ ಕುರಿತು ನೆನಪಿಸಿಕೊಂಡು ಆ ಸಮಯದಲ್ಲಿ ಅವರು ಕೊಟ್ಟ ಆ ಉಚಿತ ಶಿಕ್ಷಣ ಕುರಿತು ಧನ್ಯತಾ ಭಾವ ತೋರಿಸಿದರು.

ತಾವು ಸಂಪಾದಿಸಿದ ಮೊದಲ 14,000/- ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಅವರ ತಂದೆಯವರಿಗೆ ನೀಡಿದಾಗ ಅವರ ತಂದೆ ನನ್ನ ಜೀವಮಾನದಲ್ಲಿಯೇ ಇಷ್ಟು ಹಣವನ್ನು ನೋಡಿರಲಿಲ್ಲ ಎಂದಿದ್ದರಂತೆ. ಕೆಲ ಸಮಯದ ಬಳಿಕ ಮುಸ್ತಾಫಾ ಪಿ ಸಿ ರವರಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕು ಕೇವಲ ಎರಡು ತಿಂಗಳಲ್ಲಿ ಅವರ ಕುಟುಂಬದವರ ಸಂಪೂರ್ಣ ಸಾಲ ತೀರಿಸಿದ್ದರಂತೆ, ಉತ್ತಮ ಸಂಬಳದ ಉದ್ಯೋಗವನ್ನು ಹೊಂದಿದ್ದರೂ, ಅವರು ಯಾವಾಗಲೂ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರು ಎಂದು ಅವರು ಹೇಳಿದರು.

2005 ರಲ್ಲಿ, ಪಿ ಸಿ ಮುಸ್ತಫಾರವರು ಆಹಾರ ಉದ್ಯಮದಲ್ಲಿ ಐಡಿ ಫ್ರೆಶ್ ಫುಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು, ಇದೊಂದು ವಿನೂತನ ಪ್ರಯೋಗವಾಗಿದ್ದು ಇಡ್ಲಿ ಮತ್ತು ದೋಸೆ ಹಿಟ್ಟನ್ನು ತಾವೇ ತಯಾರಿಸಿ ಪ್ಯಾಕ್ ಮಾಡಿ ಅಂಗಡಿಗಳ ಮೂಲಕ ಗ್ರಾಹಕರಿಗೆ ತಲುಪಿಸುವ ಯೋಜನೆ ಅವರದ್ದಾಗಿತ್ತು. ಪಿ ಸಿ ಮುಸ್ತಫಾ ಅವರ ಸೋದರಸಂಬಂಧಿ ಒಮ್ಮೆ ಇಡ್ಲಿ-ದೋಸೆ ಹಿಟ್ಟನ್ನು ಪ್ಲ್ಯಾಸ್ಟಿಕ ಕವರೊಂದರಲ್ಲಿ ಹಾಕಿ ಮಾರಾಟ ಮಾಡುವ ಸರಬರಾಜುದಾರರನ್ನು ನೋಡಿದಾಗ ಐಡಿ ಫ್ರೆಶ್ ಫುಡ್‌ನ ಕಲ್ಪನೆ ಬಂದಿತು. ಆರಂಭದಲ್ಲಿ, ಮುಸ್ತಫಾ ಪಿಸಿ ಕಂಪನಿಯಲ್ಲಿ ₹50,000 ಹೂಡಿಕೆ ಮಾಡಿದರು ಮತ್ತು ಅವರ ಸೋದರಸಂಬಂಧಿಗೆ ಇದನ್ನು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟರು. ಆರಂಭದಲ್ಲಿ ಈ ಸಂಸ್ಥೆಯು ಬೆಂಗಳೂರಿನ 20 ಅಂಗಡಿಗಳಿಗೆ ಒಂದು ಕಿಲೋಗ್ರಾಂ ಇಡ್ಲಿ ಮತ್ತು ದೋಸೆ ಹಿಟ್ಟಿನ ಹತ್ತು ಪ್ಯಾಕೆಟ್‌ಗಳನ್ನು ಪೂರೈಸುತ್ತಿತ್ತು. ಐಡಿ ಫ್ರೆಶ್ ಫುಡ್ ಸಂಸ್ಥೆಗೆ ದಿನಕ್ಕೆ 100 ಪ್ಯಾಕೆಟ್‌ಗಳ ಮಾರಾಟ ತಲುಪುವಲ್ಲಿ ಬರೊಬ್ಬರಿ 9 ತಿಂಗಳ ಸಮಯ ಹಿಡಿದಿತ್ತು. ಮೂರು ವರ್ಷಗಳ ನಂತರ, ತಮ್ಮ ಕಂಪನಿಗೆ ತಮ್ಮ ಪೂರ್ಣಾವಧಿ ಬೇಕು ಎಂದು ಅರಿತ ಮುಸ್ತಫಾ ತಮ್ಮ ಕೆಲಸವನ್ನು ಬಿಟ್ಟು ತಮ್ಮ ಎಲ್ಲ ಉಳಿತಾಯವನ್ನು ಈ ಸಂಸ್ಥೆಯಲ್ಲಿ ತೊಡಗಿಸಿದರು. ಸಂಸ್ಥೆಯು ಮೊದಲ ದಿನದಿಂದಲೇ ಲಾಭಗಳಿಸಲು ಪ್ರಾರಂಬಿಸಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮುಸ್ತಫಾ ಹೆಚ್ಚು ಯಂತ್ರಗಳನ್ನು ಖರೀದಿಸಲು ಮತ್ತು 800 ಚದರ ಅಡಿಗಳ ದೊಡ್ಡ ಜಾಗಕ್ಕೆ ಹೋಗಲು 6 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಇವತ್ತು ನೂರಾರು ಅಂಗಡಿಗಳ ಮೂಲಕ ಬಹುತೇಕ ಎಲ್ಲ ಮೆಟ್ರೋ ಸಿಟಿಗಳಲ್ಲಿ ಮಾರಾಟವಾಗುತ್ತಿರುವ ಐಡಿ ಫ್ರೆಶ್ ಫುಡ್ ಉತ್ಪನ್ನಗಳು ಪಿ ಸಿ ಮುಸ್ತಫಾ Breakfast King of the Country ಎಂದು ಪ್ರಸಿದ್ದರಾಗಿದ್ದಾರೆ. ಪ್ರಸ್ತುತ ಐಡಿ ಫ್ರೆಶ್ ಫುಡ್ ಸಂಸ್ಥೆಯ ವಾರ್ಷಿಕ ವಹಿವಾಟು 238 ಕೋಟಿ ರೂಪಾಯಿಗಳು.
SecularTV SecularTVKannada