ಬೆಂಗಳೂರು(ಸೆ,1): ಜಪಾನ್ ದೇಶದಲ್ಲಿ ಮಾಡರ್ನಾ ಲಸಿಕೆಗಳ ಬಳಕೆ ರದ್ದುಗೊಳಿಸುವುದಾಗಿ ಅಲ್ಲಿನ ಸರ್ಕಾರ ಹೇಳಿಕೊಂಡಿದ್ದು ಆದರೆ, ಎರಡು ಕೋವಿಡ್ -19 ಲಸಿಕೆಗಳ ಪ್ರತಿರಕ್ಷಣಾ ಪ್ರತಿಕ್ರಿಯೆಗಳ ಅಧ್ಯಯನದಲ್ಲಿ ಮಾಡರ್ನಾ ಲಸಿಕೆ ಫೈಜರ್-ಬಯೋಎನ್‌ಟೆಕ್ ಈ ಲಸಿಕೆಗಿಂತಲೂ ಎರಡು ಪಟ್ಟು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಸಂಶೋಧಕರು ಬೆಲ್ಜಿಯಂನ ಆರೋಗ್ಯ ರಕ್ಷಣಾ ಕಾರ್ಯಕರ್ತರ ಪ್ರತಿಕಾಯ ಮಟ್ಟವನ್ನು ವಿಶ್ಲೇಷಿಸಿದ್ದು, ಈ ಅಧ್ಯಯನದಲ್ಲಿ ಲಸಿಕೆಗಳ ಎರಡು ಡೋಸ್‌ಗಳನ್ನು ಪಡೆಯಲಾಯಿತು ಇದರಲ್ಲಿ 688 ಮಾಡರ್ನಾ ಲಸಿಕೆ ಮತ್ತು 959 ಫೈಜರ್ ಶಾಟ್‌ಗಳನ್ನು ಪಡೆಯಲಾಗಿದೆ ಎಂದು ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ಸೋಮವಾರ ಪ್ರಕಟವಾಗಿದೆ.
ಕೋವಿಡ್-19 ಸೋಂಕಿಗೆ ಒಳಗಾಗದವರಲ್ಲಿ ಪ್ರತಿ ಮಿಲಿಲೀಟರ್‌ಗೆ 1,108 ಯೂನಿಟ್ ಪತ್ತೆಯಾಗಿರುವ ರೋಗ ನೀರೋಧಕ ಶಕ್ತಿಯು ಇದು ಫೈಜರ್ ಲಸಿಕೆಯ ಅಧ್ಯಯನವಾಗಿದೆ ಇನ್ನು ಇದನ್ನು ಹೋಲಿಸಿದರೆ ಮಾಡರ್ನಾ ಸ್ವೀಕರಿಸುವವರು ಪ್ರತಿ ಮಿಲಿಲೀಟರ್‌ಗೆ ಸರಾಸರಿ 2,881 ಯೂನಿಟ್‌ಗಳನ್ನು ಹೊಂದಿದ್ದಾರೆ ಎಂದು ಅಧ್ಯಯನ ಹೇಳಿದೆ.

ಒಟ್ಟಾರೆ ಈ ಎರಡು ಲಸಿಕೆಗಳು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ಲಸಿಕೆಗಳಾಗಿವೆ ಹಾಗೂ ಈ ಲಸಿಕೆಗಳನ್ನು ಉಪಯೋಗಿಸಬಹುದು ಎಂದು ಸಲಹೆ ನೀಡಿರುವ ಅಧ್ಯಯನವು ಹೆಚ್ಚಿನ ಪ್ರತಿಕಾಯದ ಮಟ್ಟವನ್ನು ವರದಿ ಮಾಡಿದ್ದಾರೆ ಈ ಅಧ್ಯಯನದಲ್ಲಿ ಒಟ್ಟಾರೆ ಸರಾಸರಿಯನ್ನು ಮಾಡರ್ನಾಗೆ ಮಿಲಿಲೀಟರಗೆ ರೋಗ ನಿರೋಧಕ ಶಕ್ತಿಯು 3,836 ಯೂನಿಟ್‌ಗಳಷ್ಟಿದೆ ಹಾಗೂ ಫೈಜರ್ ಮಿಲಿಲೀಟರ್ 1,444 ಯೂನಿಟ್‌ಗಳಷ್ಟು ಹೋಲಿಕೆ ಇದೆ ಅಧ್ಯಯನ ಹೇಳಿದೆ.