ದೆಹಲಿ: ಕೊರೊನಾ ಸಂಕಷ್ಟದಲ್ಲಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ದೇಶಿಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದ್ದು ಗ್ರಾಹಕರು ಜೇಬಿಗೆ ಹೊರೆಯಾಗಿದೆ.. ಕಳೆದ 15 ದಿನದಲ್ಲಿ ಎರಡನೇ ಬಾರಿ ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ..

ಹೌದು ಈಗಾಗಲೇ ಕೊರೊನಾದಿಂದಾಗಿ ದೇಶದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಲಕ್ಷಾಂತರ ಕುಟುಂಬಗಳು ಒಂದು ಹೊತ್ತಿನ ತುತ್ತಿಗೂ ಕಷ್ಟ ಪಡುತ್ತಿವೆ. ಈ ಮಧ್ಯೆ ಪೆಟ್ರೋಲ್ ಡಿಸೇಲ್ ನಿಂದ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮತ್ತೆ ಸಬ್ಸಿಡಿ ರಹಿತ ಎಲ್‌ಪಿಜಿ ಗ್ಯಾಸ್ ಬೆಲೆ 50 ರೂ. ರಷ್ಟು ದುಬಾರಿಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸೋ ಜನತೆಗೆ ಇದು ಶಾಕ್ ಆಗಿದ್ದು ಇಂದು ಅಂದರೆ ಸೆಪ್ಟೆಂಬರ್ 1 ರಂದು ಸಿಲಿಂಡರ್ ದರವನ್ನು ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. ಈ ಹಿಂದೆ, ಆಗಸ್ಟ್ 18 ರಂದು ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಲಾಗಿತ್ತು, ಇದರ ನಂತರ ಈಗ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ.ಗೆ ತಲುಪಿದೆ.
ಈ ಮೊದಲು ಜುಲೈ ಮತ್ತು ಆಗಸ್ಟ್‌ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲಾಗಿತ್ತು.. ಮೇ ಮತ್ತು ಜೂನ್‌ನಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿಯಾವುದೇ ಬದಲಾವಣೆಯಾಗಿರಲಿಲ್ಲಾ.. ಏಪ್ರಿಲ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 10 ರೂಪಾಯಿ ಕಡಿತಗೊಳಿಸಲಾಗಿತ್ತು.
ಬೆಲೆ ಏರಿಕೆ ಬಿಸಿ
*ಜನವರಿ-2021 ಅಂತ್ಯದವರೆಗೂ ₹694 ಇದ್ದ ಗೃಹ ಬಳಕೆ ಸಿಲಿಂಡರ್
*ಫೆಬ್ರವರಿ-2021 ಆರಂಭದಲ್ಲಿ 25 ರೂಪಾಯಿಗೆ ಹೆಚ್ಚಳ
*ಫೆಬ್ರವರಿ 15 ರಂದು ₹50 ರೂಪಾಯಿ ಏರಿಕೆ
*ಫೆಬ್ರವರಿ 25 ರಂದು ₹25 ರೂಪಾಯಿ ಹೆಚ್ಚಳ
*ಮಾರ್ಚ್-2021 ಆರಂಭದಲ್ಲಿ ₹25 ರೂಪಾಯಿ ಏರಿಕೆ
*ಬಳಿಕ ₹10 ರೂಪಾಯಿ ಕಡಿಮೆ ಮಾಡಿದ್ದ ಇಂಧನ ಕಂಪನಿಗಳು
*2021ರಲ್ಲಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಮೇಲೆ ₹165.50 ಬೆಲೆ ಏರಿಕೆ
*ಕಳೆದ ಏಳು ವರ್ಷಕ್ಕೆ ಹೋಲಿಸಿದರೆ ಸಿಲಿಂಡರ್ ಬೆಲೆ ದುಪ್ಪಟ್ಟು
*ಮಾರ್ಚ್ 01, 2014 ರಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ ₹410.50 ರೂ

ಒಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದಾಗಿನಿಂದ ದೇಶದಲ್ಲಿ ಬೆಲೆ ಏರಿಕೆಯಾಗುತ್ತಲೆ ಇದೆ. ಮಧ್ಯಮ ಹಾಗೂ ಆರ್ಥಿಕ ಸಂಕಷ್ಟದಲ್ಲಿರೋ ಕುಟುಂಬಗಳಿಗೆ ಜೀವನ ನಿರ್ವಹಣೆಯೇ ಕಷ್ಷವಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅದೆಲ್ಲದರ ಮಧ್ಯೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಗ್ಯಾಸ್ ಬೆಲೆ ಆರ್ಥಿಕ ಸಂಕಷ್ಟದಲ್ಲಿರೋ ಕುಟುಂಬಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.
LPG cylinder price hike Delhi