ಚಿಕ್ಕಬಳ್ಳಾಪುರ: ಪ್ರಯಾಣಿಕನ ಜೊತೆ ಇದ್ದ ಕೋಳಿಗೂ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಟಿಕೆಟ್ ಕೊಟ್ಟಿದ್ದು, ಇದರಿಂದ ಪ್ರಯಾಣಿಕ ತನ್ನ ಪಕ್ಕದ ಸೀಟ್ನಲ್ಲೇ ಕೋಳಿಯನ್ನೂ ಕೂರಿಸಿಕೊಂಡು ಪ್ರಯಾಣಿಸಿದ್ದಾನೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಸೋಮೇಶ್ವರದ ವ್ಯಕ್ತಿಯೊಬ್ಬ ಪೆರೇಸಂದ್ರದಲ್ಲಿ ನಾಟಿ ಕೋಳಿಯೊಂದನ್ನು ಖರೀದಿಸಿ ವಾಪಸ್ ಮನೆಗೆ ಹೋಗಲೆಂದು ಕೆಎಸ್ಆರ್ಟಿಸಿ ಬಸ್ ಹತ್ತಿದ್ದರು. ಸೋಮೇಶ್ವರಕ್ಕೆ ಒಂದು ಟಿಕೆಟ್ ಕೊಡಿ ಎಂದು ಪ್ರಯಾಣಿಕ ಕೇಳಿದ್ರೆ, ಬಸ್ ಕಂಡಕ್ಟರ್ ಕೊಟ್ಟದ್ದು ಒಂದೂವರೆ ಟಿಕೆಟ್! ಪ್ರಯಾಣಿಕನಿಗೆ ಒಂದು ಟಿಕೆಟ್(10 ರೂ.), ಅವರ ಜತೆ ಇದ್ದ ನಾಟಿಕೋಳಿಗೂ ಅರ್ಧ ಟಿಕೆಟ್(5 ರೂ.) ಕೊಟ್ಟಿದ್ದಾರೆ.
ಕೋಳಿಗೂ ಟಿಕೆಟ್ ಕೊಟ್ಟಿದ್ದಕ್ಕೆ ಪ್ರಯಾಣಿಕ ತನ್ನ ಪಕ್ಕದ ಸೀಟ್ನಲ್ಲೇ ಕೋಳಿಯನ್ನೂ ಕೂರಿಸಿಕೊಂಡು ಪ್ರಯಾಣಿಸಿದ್ದಾನೆ. ಇದನ್ನು ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಟಿಕೆಟ್ ಸಮೇತ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಫೋಟೊ ವೈರಲ್ ಆಗಿದ್ದು, ಈ ವಿಚಾರ ಈಗ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
ಚಿಕ್ಕಬಳ್ಳಾಪುರ, ಕೆಎಸ್ಆರ್ ಟಿಸಿ, ಪ್ರಯಾಣಿಕ, ಕೋಳಿ, ಟಿಕೆಟ್, ಸೆಕ್ಯೂಲರ್ ಟಿವಿ, chikkaballapur, KSRTC, Passenger, Hen, Ticket, SecularTv,