ಬೆಂಗಳೂರು: ಹೌದು ಸಹಜವಾಗಿಯೇ ಈ ಪ್ರಶ್ನೆ ಮೂಡುತ್ತದೆ, ಆಟೋ ಮತ್ತು ಟ್ಯಾಕ್ಸಿ ವಲಯದಲ್ಲಿ ಇಂದಿನ ಈ Android App ಟೆಕ್ನಾಲಜಿ ಬರುವ ಮುನ್ನ ಅಲ್ಪ ಸ್ವಲ್ಪ ದುಡ್ಡು ಕೂಡಿಟ್ಟು, ಸಾಲ ಸೋಲ ಮಾಡಿ ತಮ್ಮದೇ ಆದ ಆಟೋ ಅಥವಾ ಕ್ಯಾಬ್ ಖರೀದಿಸಿ, ಅದನ್ನು ವಾಣಿಜ್ಯ ಬಳಕೆಗಾಗಿ ನೋಂದಣಿ ಮಾಡಿಸಿ, ಖರೀದಿಸುವಾಗಲೂ ತೆರಿಗೆ ಕಟ್ಟಿ, ಚಲಾಯಿಸಲು ರಸ್ತೆ ತೆರಿಗೆ ಕಟ್ಟಿ, ಪರ್ಮೀಟ್ ತೆಗೆದುಕೊಂಡು, ಇನ್ ಸುರೆನ್ಸ್ ಪಾವತಿಸಿ, ಡಿಸೇಲ್ ಹಾಕಿಸಿ ನಂತರ ಬರುವ ಆದಾಯದಲ್ಲಿ ಸಾಲದ ಕಂತನ್ನು ಕಟ್ಟಿ, ಮನೆ ಬಾಡಿಗೆ ಕಟ್ಟಿ , ಸಂಸಾರ ನಡೆಸುತ್ತ ತಕ್ಕ ಮಟ್ಟಿಗೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ಚಾಲಕರ ಬಾಳಲ್ಲಿ ಈ Android App ಟೆಕ್ನಾಲಜಿ ಬಂದಾಗ ಅಬ್ಬಾ ಇನ್ನು ನಾವು ಸಾಕಷ್ಟು ಸಂಪಾದನೆ ಮಾಡಬಹುದು ಮತ್ತು ಭವಿಷ್ಯಕ್ಕಾಗಿ ಹಣವನ್ನು ಕೂಡಿಡಬಹುದು ಎಂದು ಹರ್ಷ ವ್ಯಕ್ತ ಪಡಿಸಿದ್ದರು ಆದರೆ ಈ ಸಂತೋಷ ಬಹುಷಃ ಕೆಲವೇ ವರ್ಷಗಳಿಗೆ ಸಿಮೀತವಾಗುತ್ತದೆ ಅಂತ ಯಾರು ಭಾವಿಸಿರಲಿಲ್ಲ . ಕಾಯುವ ಕಷ್ಟ ತಪ್ಪಿತು ಇನ್ನು ಎಲ್ಲಿ ಹೋದರು ತಮಗೆ ಬಾಡಿಗೆಗಳು ಸಿಗುತ್ತವೆ ಅಂತ ಇದ್ದ ಬದ್ದ ಎಲ್ಲ ಆನ್ ಲೈನ್ ಬುಕಿಂಗ್ಸ ಕೋಡುವ ಸಂಸ್ಥೆಗಳಿಗೆ ತಮ್ಮ ವಾಹನಗಳನ್ನು ಅಟ್ಯಾಚ್ ಮಾಡಿಸಿಕೊಂಡು ಡ್ಯೂಟಿಗಳನ್ನು ಮಾಡುತ್ತಿದ್ದ ಚಾಲಕರಿಗೆ ಈಗ ಬಿಸಿ ತುಪ್ಪ ಬಾಯಲ್ಲಿ ಇಟ್ಟ ಅನುಭವವಾಗುತ್ತಿದೆ.

ಇನ್ನು ನಮ್ಮ ಚಾಲಕರ ಟ್ರೇಡ್ ಯೂನಿಯನ್(ನೋ) ಚಾಲಕರ ಸಂಘ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಆಪ್ ಬೇಸಡ್ ಆನ್ ಲೈನ್ ಬುಕಿಂಗ್ಸ ಕೋಡುವ ಸಂಸ್ಥೆಗಳ ವಿರುದ್ದ ಚಾಲಕರ ಆಕ್ರೋಶಭರಿತ ಮಾತುಗಳ ವೀಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.

ಮೊದಲಿಗೆ ಎದ್ನೋ ಬಿದ್ನೋ ಅಂತ ಆನ್ ಲೈನ್ ಬುಕಿಂಗ್ಸ್ ಕೋಡುವ ಸಂಸ್ಥೆಗಳಿಗೆ ತಮ್ಮ ವಾಹನಗಳನ್ನು ಅಟ್ಯಾಚ್ ಮಾಡಿಸಿಕೊಂಡ ಚಾಲಕರು ಈಗ ಯಾಕಾದರೂ ಈ ಸಂಸ್ಥೆಗಳಿಗೆ ಸೇರಿಸಿದ್ದೆವೆ ಅನ್ನುವ ಪರಿಸ್ತಿತಿ ನಿರ್ಮಾಣವಾಗಿದೆ. ಬೆಂಗಳೂರು ಮಾತ್ರವಲ್ಲದೇ ಕರ್ನಾಟಕ ರಾಜ್ಯ ಮತ್ತು ದೇಶದೆಲ್ಲೇಡೆ ಅಗ್ರಿಗೆಟರ್ ನಿಯಮದಡಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸಂಸ್ಥೆಗಳು ಗ್ರಾಹಕರ ಬಳಿ ಹೆಚ್ಚಿನ ಶುಲ್ಕ ವಸೂಲಿ ಮಾಡಿ ತನಗೆ ಸೇರಬೇಕಾದ ಕಮಿಷನ್ ಜೊತೆಗೆ ಇನ್ನಿತರ ಬೇರೆ ಶುಲ್ಕ ಅಥವಾ ತೆರಿಗೆ ಹೆಸರಲ್ಲಿ ಹೆಚ್ಚಿನ ಹಣ ತೆಗೆದುಕೊಂಡು ಚಾಲಕರಿಗೆ ಅತೀ ಕಡಿಮೆ ಹಣವನ್ನು ಪಾವತಿ ಮಾಡಲಾಗುತ್ತಿದೆ. ಈ ಹಣದಲ್ಲಿ ನಾವಿಗಾಗಲೇ ತಿಳಿಸಿದಂತೆ ರಸ್ತೆ ತೆರಿಗೆ, ಪರ್ಮೀಟ್, ಇನ್ ಸುರೆನ್ಸ್, ಡಿಸೇಲ್ ಮತ್ತು ಸಾಲದ ಕಂತನ್ನುಕಟ್ಟಿ ಮನೆಗೆ ಬರೀ ಕೈಯಲ್ಲಿ ಹೋಗುವ ಪರಿಸ್ತಿತಿ ನಿರ್ಮಾಣವಾಗಿದೆ, ಈ ಮಧ್ಯೆ ಅನದೀಕೃತವಾಗಿ ಯಾವುದೇ ರೀತಿಯ ಪರ್ಮಿಟ್ ಇಲ್ಲದೇ ವೈಟ್ ಬೋರ್ಡ ಟೂ ವ್ಹೀಲರ ಬಳಸಿ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ತಲೆ ಎತ್ತಿದ್ದು ಈ ಕುರಿತು ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಿಡಿ ಕಾರಿದ್ದಾರೆ.

ಈ ಕುರಿತು ನಮ್ಮ ಚಾಲಕರ ಟ್ರೇಡ್ ಯೂನಿಯನ್(ನೋ) ಚಾಲಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ ರವರು ಹಲವಾರು ಬಾರಿ ಸಾರಿಗೆ ಸಚಿವರಿಗೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಈ ವರೆಗೆ ಸರ್ಕಾರದ ಕಡೆಯಿಂದ ಯಾವುದೇ ಕ್ರಮ ಜರುಗಿಸದಿರುವುದನ್ನು ನೋಡಿದರೆ ಸರ್ಕಾರದ ಮೇಲೆ ಚಾಲಕರ ಮತ್ತು ಪ್ರಜೆಗಳ ಇಟ್ಟ ನಂಬಿಕೆಗೆ ಎಲ್ಲೊ ಒಂದು ರೀತಿಯಲ್ಲಿ ದ್ರೋಹವಾಗುತ್ತಿದೆ ಎನ್ನಲಾಗಿದೆ. ಈ ಕೂಡಲೇ ಸರ್ಕಾರ ಈ ಆಪ್ ಮೂಲಕ ಆನ್ ಲೈನ್ ಬುಕಿಂಗ್ಸ್ ಕೋಡುವ ಸಂಸ್ಥೆಗಳು ಮತ್ತು ವೈಟ್ ಬೋರ್ಡ ಟೂ ವ್ಹೀಲರ ಬಳಸಿ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ ಈ ಮೂಲಕ ಆಟೋ ಅಥವಾ ಕ್ಯಾಬ್ ಮಾಲೀಕರಾದ ಚಾಲಕರನ್ನು ಜೀತ ಪದ್ದತಿಯಂತೆ ಬಳಸಿಕೋಳ್ಳುವುದನ್ನು ತಪ್ಪಿಸಬೇಕಾಗಿದೆ.