ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ ಪ್ರೇಕ್ಷಕರಿಗೆ ಮತ್ತಷ್ಟು ಕ್ರೇಜ್ ನೀಡಲಿದ್ದು ಬಿಸಿಸಿಐ ಎರಡು ಹೊಸ ಐಪಿಎಲ್ ತಂಡಗಳನ್ನು ಕಟ್ಟಲು ಪೂರ್ವ ಯೋಜನೆ ರೂಪಿಸಿ ಅಹಮದಾಬಾದ್ ಮತ್ತು ಲಕ್ನೋ ತಂಡಕ್ಕೆ ಟೆಂಡರ್ ಘೋಷಿಸಲಾಗಿದೆ. ಮುಂದಿನ ಐಪಿಎಲ್ ಸೀಸನ್‌ನಲ್ಲಿ(2022) ಮತ್ತೆರಡು ತಂಡಗಳು ಸೇರಲಿದ್ದು ಒಟ್ಟು ಐಪಿಎಲ್ ಸರಣಿಯಲ್ಲಿ ಹತ್ತು ತಂಡಗಳು ಮೈದಾನಕ್ಕೆ ಇಳಿಯಲಿವೆ. ಮತ್ತೇರಡು ದೊಡ್ಡ ನಗರಗಳ ಪ್ರೇಕ್ಷಕರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಬಿಸಿಸಿಐ ಶುಭ ಸುದ್ದಿ ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 2022ರ ಆವೃತ್ತಿಯಲ್ಲಿ ಎರಡು ಹೊಸ ಫ್ರಾಂಚೈಸಿಗಳು ಸೇರಲಿದ್ದು ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಯು ಕನಿಷ್ಠ ₹ 5000 ಕೋಟಿ ರೂಪಾಯಿಗಳಷ್ಟು ಈ ಕ್ರಿಕೆಟ್‌ನ್ನು ಶ್ರೀಮಂತಗೊಳಿಸಲಿದೆ ಎಂದು ವರದಿಯಾಗಿದೆ. ಪ್ರಸ್ತುತ 8 ತಂಡಗಳ ಟೂರ್ನಿಯಾಗಿರುವ ಐಪಿಎಲ್ ಮುಂದಿನ ಆವೃತ್ತಿಯಿಂದ 10 ತಂಡಗಳ ವ್ಯವಹಾರವಾಗಲಿದೆ ಮತ್ತು ಇತ್ತೀಚಿನ ಆಡಳಿತ ಮಂಡಳಿ ಸಭೆಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯ ವಿಧಾನಗಳನ್ನು ಬಿಸಿಸಿಐ ಪ್ರಕಟಣೆಯಲ್ಲಿ ವಿವರಿಸಿದೆ.
ಐಪಿಎಲ್, ಬಿಸಿಸಿಐ, ಐಸಿಸಿ
ಅಹ್ಮದಾಬಾದ್, ಲಕ್ನೋ, IPL, BCCI, ICC
Ahmedabad, Lucknow, RCB.