ಮುಂಬೈ: ಸಾಹಸ ಚಿತ್ರಗಳನ್ನು ಇಷ್ಟ ಪಡುವ ಬಾಲಿವುಡ್ ಯಂಗ್ ಸ್ಟಾರ್ ಟೈಗರ್ ಶ್ರಾಫ್ (Tiger Shroff) ಇತ್ತೀಚಿಗೆ ಮುಂಬೈ ನಗರದಲ್ಲಿ 8 BHK ಫ್ಲಾಟ್ (ಮನೆ) ಖರೀದಿಸಿದ್ದಾರೆ. ಇದರ ಬೆಲೆಯನ್ನು ನೀವು ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ ಇಷ್ಟಲ್ಲದೆ ಟೈಗರ್ ಶ್ರಾಫ್ ಕೋಟ್ಯಂತರ ಮೌಲ್ಯದ ಆಸ್ತಿಯ ಮಾಲೀಕರು ಸಹ ಆಗಿದ್ದಾರೆ.


ಹೀರೋಪಂತಿ ಚಿತ್ರದ ಮೂಲಕ ತಮ್ಮ ನಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ನಟ ಟೈಗರ್ ಶ್ರಾಫ್ ಇಂದು ಬಾಲಿವುಡ್ ದೊಡ್ಡ ತಾರೆ ಟೈಗರ್ ಚಿಕ್ಕ ವಯಸ್ಸಿನಿಂದಲೇ ಸಿನಿಮಾಗಳಲ್ಲಿ ತೊಡಗಿಕೊಂಡ ಯಶಸ್ಸನ್ನು ಸಾಧಿಸಿದ್ದಾರೆ. ಟೈಗರ್ ಸಾಹಸಿ ಚಲನಚಿತ್ರಗಳಲ್ಲಿ ಪಡೆದ ಯಶಸ್ಸಿನಿಂದಾಗಿ ಇಂದು ಈ ನಟ ತನ್ನ 31ನೇ ವಯಸ್ಸಿನಲ್ಲಿಯೇ 104 ಕೋಟಿ ರೂ.ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ. ಚಲನಚಿತ್ರಗಳಲ್ಲದೆ ಟೈಗರ್ ಶ್ರಾಫ್ ಅನೇಕ ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

ಟೈಗರ್ ಶ್ರಾಫ್ ಬಾಲಿವುಡ್ ಸಿನಿಮಾಗಳಲ್ಲಿ ದುಬಾರಿ ನಟರಲ್ಲಿ ಒಬ್ಬರು, ಟೈಗರ್ ತಮ್ಮ ಪ್ರತಿ ಚಿತ್ರಕ್ಕೂ 30 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ, 2019ರಲ್ಲಿ ತೆರೆ ಕಂಡ ವಾರ್ ಚಲನಚಿತ್ರವು ಅವರ ವೃತ್ತಿ ಜೀವನದ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

31 ಕೋಟಿ ರೂ. ಮೌಲ್ಯದ ಮನೆ
ಟೈಗರ್ ಶ್ರಾಫ್ ಇತ್ತೀಚೆಗೆ ತನ್ನ ಕುಟುಂಬಕ್ಕಾಗಿ 8 BHK ಹೊಂದಿರುವ ಅಪಾರ್ಟ್ಮೆಂಟಿನ ಮನೆಯೊಂದನ್ನು ಖರೀದಿಸಿದ್ದಾರೆ. ಇದರ ವೆಚ್ಚ ಸುಮಾರು 31 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು, ಈ ಟೈಗರ್ ಮನೆಯೂ ಮುಂಬೈನ ಕಾರ್ಟರ್ ರಸ್ತೆಯಲ್ಲಿದೆ.
ಈ ಹಿಂದೆ ಟೈಗರ್‌ನ ಇಡೀ ಕುಟುಂಬ 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು.
ಟೈಗರ್ ಶ್ರಾಫ್ ಅವರ ಪೂರ್ವಿಕರ ಮನೆ ಕೂಡ ಖಂಡಾಲಾದಲ್ಲಿ ಇದ್ದು, ಇದು ಕೂಡ 5 ಸ್ಟಾರ್ ರೆಸಾರ್ಟ್‌ಗಿಂತ ಕಡಿಮೆಯಿಲ್ಲ ಸಾಹಸಿ ಚಿತ್ರಗಳಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೈಗರ್ ಶ್ರಾಫ್ ಗಣಪತ್ ಮತ್ತು ಹೀರೋಪಂತಿ 2 ಮುಂದಿನ ಈ ಎರಡು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.