ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ( Dale Steyn ) ಅಂತರಾಷ್ಟ್ರೀಯ ಕ್ರಿಕೆಟ್ ಗೆ ಇಂದು ವಿದಾಯ ಹೇಳಿದ್ದಾರೆ. ಪ್ರಸ್ತುತ ಇರುವ ಎಲ್ಲಾ ಮಾದರಿಯ ಕ್ರಿಕೆಟ್ಗೆ ಅವರು ನಿವೃತ್ತಿಯನ್ನು ಘೋಷಿಸಿದ್ದು, ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 635 ವಿಕೆಟ್ ಪಡೆದಿರುವ ಸ್ಟೇನ್ ಕಳೆದ ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದಾಗ್ಯೂ ಲೀಗ್ ಕ್ರಿಕೆಟ್ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದರು. ಇದೀಗ ಟಿ-20 ವಿಶ್ವಕಪ್ಗೂ ಮುನ್ನ ವಿದಾಯ ಘೋಷಿಸಿ ಈ ಬಾರಿಯ ಚುಟುಕು ಕದನಕ್ಕೆ ಅಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಡೇಲ್ ಸ್ಟೇನ್ ಟೆಸ್ಟ್ ನಲ್ಲಿ 435 ವಿಕೆಟ್ ಪಡೆದಿದ್ದರೆ, ಏಕದಿನದಲ್ಲಿ 196 ಮತ್ತು ಟಿ-20 ಯಲ್ಲಿ 64 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್ ನಲ್ಲಿ ಸ್ಟೇನ್ ಆರ್‌ಸಿಬಿ ಪರ ಆಡಿದ್ದರು. ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಟೇನ್ ಆಡಿದ್ದರು. ಅವರು ತಮ್ಮ ನಿವೃತ್ತಿಯನ್ನು ಟ್ವಿಟರ್ ನಲ್ಲಿ ಘೋಷಿಸಿದ್ದಾರೆ. ಅತ್ಯಂತ ಭಾವನಾತ್ಮಕ ಪೋಸ್ಟ್‌ನಲ್ಲಿ, ಡೇಲ್ ಸ್ಟೇನ್ ತಮ್ಮ ತಂಡದ ಆಟಗಾರರು, ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಪತ್ರಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ಐಸಿಸಿ, ಬಿಸಿಸಿಐ, ಡೇಲ್ ಸ್ಟೇನ್, ಕ್ರಿಕೆಟರ್, ವಿದಾಯ, ಸೆಕ್ಯೂಲರ್ ಟಿವಿ, Dale steyn, ICC, BCCI, Cricketer, Resign, SecularTv