ಬೆಂಗಳೂರು : ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ( Kiccha Sudeep ) ಅವರ ಜನ್ಮದಿನಕ್ಕೆ ದಿನಗಣನೆ ಶುರುವಾಗಿದೆ… ಬರುವ ಸೆಪ್ಟೆಂಬರ್ 2 ರಂದು ತಮ್ಮ 50 ನೇ ವರ್ಷದ ಹುಟ್ಟುಹಬ್ಬವನ್ನು ಸುದೀಪ್ ಆಚರಿಸಿಕೊಳ್ಳಲಿದ್ದಾರೆ… ತಮ್ಮ ಹುಟ್ಟುಹಬ್ಬದ ಕುರಿತಾಗಿ ಅಭಿಮಾನಿಗಳಿಗೆ ಸುದೀಪ್ ವಿಶೇಷ ಸಂದೇಶ ಕಳುಹಿಸಿದ್ದಾರೆ.
ಬಿಗ್ ಸೆಲೆಬ್ರೇಷನ್‌ಗೆ ಬ್ರೇಕ್
ಪ್ರತಿ ವರ್ಷ ಸೆಪ್ಟೆಂಬರ್ 2 ಬಂತು ಅಂದ್ರೆ ಕಿಚ್ಚನ ಅಭಿಮಾನಿಗಳಲ್ಲಿ ಸಡಗರ, ಸಂಭ್ರಮ ತುಂಬಿ ತುಳುಕುತ್ತಿತ್ತು. ನೆಚ್ಚಿನ ನಟ ಸುದೀಪ್ ಅವರ ಬರ್ತಡೇಯನ್ನ ದೊಡ್ಡ ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು.. ಜೊತೆಗೆ ಸಮಾಜಮುಖಿ ಕೆಲಸಗಳನ್ನು ಕೈಗೊಂಡು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವನ್ನು ಫ್ಯಾನ್ಸ್ ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು… ಆದರೆ, ಇವೆಲ್ಲದ್ದಕ್ಕೂ ಈಗ ಬ್ರೇಕ್ ಬಿದ್ದಿದೆ… ಸಂಭ್ರಮಾಚರಣೆಗಿಂತ ಅಭಿಮಾನಿಗಳ ಆರೋಗ್ಯವೇ ನನಗೆ ಮುಖ್ಯ ಎಂದಿದ್ದಾರೆ ಕಿಚ್ಚ ಸುದೀಪ್.

ಅಭಿಮಾನಿಗಳಿಗೆ ಸುದೀಪ್ ಸಂದೇಶ.
ನನ್ನೆಲ್ಲಾ ಪ್ರೀತಿಯ ಅಭಿಮಾನಿ ಸ್ನೇಹಿತರಲ್ಲಿ ಮನವಿ.. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ… ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ… ನಿಮ್ಮ ಆರೋಗ್ಯವೇ ನನಗೆ ಮುಖ್ಯ ಎಂದು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಂದೇಶ ಕೊಟ್ಟಿದ್ದಾರೆ.

ಕೋವಿಡ್ ನಂತರ ಬಹುತೇಕ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ… ಈ ಹಿಂದಿನ ವರ್ಷಗಳಲ್ಲಿ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟರು ಇತ್ತೀಚಿನ ಎರಡು ವರ್ಷಗಳಿಂದ ಹುಟ್ಟುಹಬ್ಬದಿಂದ ದೂರ ಉಳಿಯುತ್ತಿದ್ದಾರೆ… ನಟರ ಜನ್ಮದಿನದಂದು ಅವರುಗಳ ನಿವಾಸದ ಮುಂದೆ ಅಭಿಮಾನಿಗಳ ದಂಡೇ ನೆರೆದಿರುತ್ತಿತ್ತು… ಅಭಿಮಾನಿಗಳನ್ನು ಭೇಟಿ ಮಾಡಿ, ಅವರುಗಳು ತರುವ ಕೇಕ್‌ಗಳನ್ನು ಕಟ್ ಮಾಡಿ, ಸೆಲ್ಫಿ ಕ್ಲಿಕ್ ಮಾಡಿಕೊಂಡು ನಟರು ಸಂಭ್ರಮಿಸುತ್ತಿದ್ದರು. ಆದರೆ, ಕೋವಿಡ್‌ನಿಂದ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ…
ಪ್ರೀತಿಯಿಂದ ತಮ್ಮ ಮನೆ ಬಳಿ ಬರುವ ಅಭಿಮಾನಿಗಳಲ್ಲಿ ದೂರದಿಂದಲೇ ಶುಭ ಹಾರೈಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.