ಶ್ರಾವಣಮಾಸ ಅಂದರೆ ಎಲ್ಲಿಲ್ಲದ ಸಡಗರ. ಈ ಮಾಸವನ್ನು ಹಬ್ಬಗಳ ಮಾಸವೆಂತಲೇ ಕರೆಯಬಹುದು. ಶ್ರಾವಣಮಾಸದಲ್ಲಿ ಅಣ್ಣ-ತಂಗಿಯರ ಪ್ರೀತಿ ಬಾಂಧವ್ಯಕ್ಕೆ ಸಾಕ್ಷಿಯಾಗಿ ಆಚರಿಸುವ ರಕ್ಷಾ ಬಂಧನ ಬಂದರೆ, ಅದರ ನಂತರ ಬರುವ ಪ್ರಮುಖ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ (Shri Krishna Janmashtami)

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣ ದ್ವಾಪರ ಯುಗದಲ್ಲಿ ಜನಿಸಿದವನು. ಇವನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಆ ಸಮಯದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದನು ಎಂಬ ಐತಿಹ್ಯವಿದೆ. ದುಷ್ಟರ ಶಿಕ್ಷೆಗೆ ಮತ್ತು ಶಿಷ್ಟರ ರಕ್ಷಣೆಗೆ ಶ್ರೀ ವಿಷ್ಣು ಅನೇಕ ಅವತಾರಗಳನ್ನು ಎತ್ತಿದ್ದಾನೆ. ಇವುಗಳಲ್ಲಿ ಶ್ರೀಕೃಷ್ಣನ ಅವತಾರ ಅತ್ಯಂತ ಮುಖ್ಯವಾದುದು ಮತ್ತು ಜನಮಾನಸದಲ್ಲಿ ಎಂದು ಮರೆಯದ ಅವತಾರ.
Lord Krishna
ಶ್ರೀ ಕೃಷ್ಣ ನ ಜನ್ಮವಾದ ಈ ನಕ್ಷತ್ರ ಮತ್ತು ಗೋತ್ರವಾದ ಈ ದಿನವನ್ನು ಭಾರತವಲ್ಲದೆ ವಿಶ್ವದ ನಾನಾ ಭಾಗಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು, ಶ್ರೀಕೃಷ್ಣನು ರಾತ್ರಿ ಸಮಯದಲ್ಲಿ ಜನಿಸಿದ ಕಾರಣ ರಾತ್ರಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ, ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಿ. ಶ್ರೀಕೃಷ್ಣನಿಗೆ ಸಕ್ಕರೆ ಕ್ಯಾಂಡಿ, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಬಹುತೇಕ ತಾಯಂದಿರು ತಮ್ಮ ಮಕ್ಕಳಿಗೆಲ್ಲ ಶ್ರೀ ಕೃಷ್ಣ ವೇಷ ಮತ್ತು ರಾಧಾ ವೇಷ ಹಾಕಿಸಿ ಖುಷಿ ಪಡುತ್ತಾರೆ.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸ್ಯಾಂಡಲ್‌ವುಡ್ ನಟ-ನಟಿಯರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ.
‘ಕೃಷ್ಣ ಜನ್ಮಾಷ್ಟಮಿ’ ಪ್ರಯುಕ್ತ ತಮ್ಮ ಮುದ್ದು ಮಗನ ಫೋಟೋ ಜೊತೆ ನಯನ ಪುಟ್ಟಸ್ವಾಮಿ

ಕನ್ನಡದ ಹೆಸರಾಂತ ಚಲನಚಿತ್ರ ನೀರ್ದೆಶಕರಾದ ರಿಷಭ್ ಶೆಟ್ಟಿ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ: ಅವರ ಮನೆಯ ತುಂಟ ಕೃಷ್ಣ ಚಿತ್ರಗಳು ಹೇಗಿವೆ ನೋಡಿ

ಹಿರಿಯ ಸಾಹಿತಗಳು- ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರುತರಾದ ಶ್ರಿ ಚಂದ್ರಶೇಖರ ಕಂಬಾರರು ಕೃಷ್ಣ ಜನ್ಮಾಷ್ಟಮಿಯ ದಿನ ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಉಡುಪಿಯ ಕೃಷ್ಣಮಠದಲ್ಲಿ ಸರಳವಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
