ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಅಂತಿಮ ಕಣದಲ್ಲಿ 385 ಅಭ್ಯರ್ಥಿಗಳು ಉಳಿದಿದ್ದಾರೆ.
ಇದೇ ಮೊದಲ ಬಾರಿ ರಾಷ್ಟ್ರೀಯ ಪಕ್ಷಗಳು ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸುತ್ತಿರುವುದರಿಂದ 58 ವಾರ್ಡಗಳ ಪೈಕಿ ಬಹುತೇಕ ಕಡೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ಕೆಲವೆಡೆ ತ್ರಿಕೋನ ಪೈಪೋಟಿ ಕಂಡುಬರುತ್ತಿದ್ದು ಇಂದಿನಿಂದ ಪ್ರಚಾರ ಕಣ ರಂಗೇರಲಿದೆ.

ಕಣದಿಂದ ಹಿಂದೆ ಸರಿದ 83 ಅಭ್ಯರ್ಥಿಗಳಾಗಿದ್ದಾರೆ, ಒಟ್ಟು 519 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ನಾಮಪತ್ರಗಳ ಪೈಕಿ 468 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಉಮೇದುವಾರಿಕೆ ವಾಪಸ್ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಒಟ್ಟು 83 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ. ಯಾವುದೇ ವಾರ್ಡ್ ನಲ್ಲೂ ಅವಿರೋಧ ಆಯ್ಕೆಯಾಗಿಲ್ಲ.
ಇಂದಿನಿಂದ ಪ್ರಚಾರದ ಆರಂಭವಾಗಲಿದ್ದು, ಸೆ.3 ರಂದು ಮತದಾನ ನಡೆಯಲಿದ್ದು ಸೆ.6 ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ, ಬಿಜೆಪಿ, ಕಾಂಗ್ರೆಸ್, ಬೆಳಗಾವಿ, Belagavi Municipal Corporation Election, BJP, Congress, Belagavi