ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಳಿ ಸರಣಿ ಬಾಂಬ್ ಸ್ಫೋಟವಾಗಿದೆ. ಸ್ಪೋಟದಲ್ಲಿ 20 ಜನರು ಸಾವನ್ನಪ್ಪಿದ್ದು, ಅಮೆರಿಕದ ಮೂವರು ಯೋಧರು ಸೇರಿದಂತೆ 50 ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾಂಬ್ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಗ್ರೇಟರ್ ಖೊರಾಸನ್ (ISPK) ಹೊತ್ತುಕೊಂಡಿದೆ ಎಂದು ವರದಿಯಾಗಿದೆ.

ತಾಲಿಬಾನ್ ಉಗ್ರರ ಹತೋಟಿಯಲ್ಲಿರುವ ಆಫ್ಘಾನಿಸ್ತಾನದಲ್ಲಿ ಈಗಾಗಲೇ ಅರಾಜಕತೆ ಉಂಟಾಗಿದೆ. ಈ ನಡುವೆ ಏರ್ ಪೋರ್ಟ್ ಬಾಂಬ್ ಸ್ಫೋಟಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ಕಾಬೂಲ್ ಏರ್ಪೋರ್ಟ್ ನ ಅಬ್ಬೆ ಗೇಟ್ ಬಳಿ ಮೊದಲು ಬಾಂಬ್ ಸ್ಫೋಟವಾಗಿತ್ತು, ಇದಾದ ಸ್ವಲ್ಪ ಹೊತ್ತಿನಲ್ಲೇ ಏರ್ಪೋರ್ಟ್ ಬಳಿ ಇರುವ ಬರೋನ್ ಹೋಟೆಲ್ ಮುಂಭಾಗದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.ಮತ್ತಷ್ಟು ಬಾಂಬ್ ದಾಳಿಯಾಗುವ ಸಾಧ್ಯತೆಗಳಿದ್ದು ಅಮೇರಿಕಾದ ಪೆಂಟಾಗನ್ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ.
#UPDATE | Emergency hospital in Kabul says around 60 wounded people have arrived so far from airport explosions: Reuters
— ANI (@ANI) August 26, 2021
ಅಮೇರಿಕಾದ ಯಾವ ಪ್ರಜೆಯೂ ಕಾಬೂಲ್ ವಿಮಾನ ನಿಲ್ದಾಣ ಬಳಿ ಬಾರದಂತೆ ಸೂಚನೆ ನೀಡಿದೆ. ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಅಮೇರಿಕಾದ ಸೈನಿಕರಿಗೆ ಗಾಯವಾಗಿದೆ ಎಂದು ವೈಟ್‌ಹೌಸ್ ಮಾಹಿತಿ ನೀಡಿದೆ.ಕಾಬೂಲ್‌ನಲ್ಲಿ ಸರಣಿ ಸ್ಫೋಟ ಆರಂಭವಾಗ್ತಿದ್ದಂತೆ ಜರ್ಮನ್ ಏರ್ ಫೋರ್ಸ್ ಕಾಬೂಲ್ ನಿಂದ ಹೊರಟಿದೆ.ಎ -400ಎಂ ವಿಮಾನ ಮೂಲಕ ಕಾಬೂಲ್ ವಿಮಾನ ನಿಲ್ದಾಣವನ್ನು ಜರ್ಮನ ಪಡೆಗಳು ಖಾಲಿ ಮಾಡಿದೆ. ಇನ್ನೂ ಇಟಲಿ ರಕ್ಷಣಾ ಇಲಾಖೆ ಇಟಲಿಯ ಯಾವುದೇ ಸೈನಿಕರಿಗೆ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದೆ.