ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಬಡಿತ ಕಡಿಮೆಯಾಗಿ ಸುಸ್ತಾಗಿದ್ದ ನಟ ದೊಡ್ಡಣ್ಣ ಅವರನ್ನ ಬುಧವಾರ ಸಂಜೆ ಜಯದೇವ ಆಸ್ಪತ್ರೆಗೆ ದೊಡ್ಡಣ್ಣ ದಾಖಲಿಸಲಾಗಿದೆ.
ಸದ್ಯ ನಟ ದೊಡ್ಡಣ್ಣ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಪ್ರೊಸಿಜರ್ ಸಂಪೂರ್ಣವಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಮೂರು ದಿನದ ಬಳಿಕ ದೊಡ್ಡಣ್ಣ ಅವರನ್ನ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಹೇಳಿದ್ದಾರೆ.
ಈ ಹಿಂದೆ ನಟ ದೊಡ್ಡಣ್ಣ ಆರೋಗ್ಯದ ಬಗ್ಗೆ ಕಿಡಿಗೇಡಿಗಳು ಊಹಾಪೋಹ ಹರಡಿಸಿದ್ದರು. ಆ ಸಂದರ್ಭ ಸ್ವತಃ ನಟ ದೊಡ್ಡಣ್ಣ ಅವ್ರೇ ತಮ್ಮಆರೋಗ್ಯದ ಬಗ್ಗೆ ವಿಡಿಯೋ ಸ್ಪಷ್ಟೀಕರಣ ನೀಡಿದ್ದರು.