ಬೆಂಗಳೂರು : ಮೈಸೂರು ಗ್ಯಾಂಗ್ ರೇಪ್‌ಗೆ ಸಂಬಂಧಿಸಿದಂತೆ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗ್ಯಾಂಗ್ ರೇಪ್ ವಿಚಾರವಾಗಿ ಪ್ರತಿಕ್ರಿಯಿಸು ಭರದಲ್ಲಿ ಮಾತನಾಡಿದ ಅವರು “ಗ್ಯಾಂಗ್ ರೇಪ್ ಅಲ್ಲಿ ಮೈಸೂರಿನಲ್ಲಿ ಆದರೆ ಕಾಂಗ್ರೆಸ್‌ನವರು ನನ್ನ ರೇಪ್ ಮಾಡ್ತಿದ್ದಾರೆ” ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದರು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಆದರೆ ಇದಕ್ಕೆ ಪ್ರತಿಕ್ರಯಿಸುವ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಈ ಹೇಳಿಕೆ ನೀಡಿದ್ದಾರೆ.
ಸದ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಳಿಕ ಉನ್ನತ ಸಚಿವ ಸ್ಥಾನ ಗೃಹ ಇಲಾಖೆಯದಾಗಿದೆ. ಹಾಗಾಗಿ ಗೃಹ ಸಚಿವರಿಗೆ ಮುಖ್ಯಮಂತ್ರಿ ನಂತರದ ಸ್ಥಾನಮಾನಗಳಿರುತ್ತೆ. ಜೊತೆಗೆ ಇಡೀ ಕಾನೂನು ವ್ಯವಸ್ಥೆ ಗೃಹ ಸಚಿವರ ಕೈಯಲ್ಲಿ ಇರುತ್ತೆ, ಆದರೆ ಇಡೀ ರಾಜ್ಯವೇ ತಲೆ ತಗ್ಗಿಸುವಂತ ಘಟನೆ ಬಗ್ಗೆ ಹೋಂ ಮಿನಿಸ್ಟರ್ ಅರಗ ಜ್ಞಾನೇಂದ್ರ ಬೇಜಾವಾಬ್ದಾರಿ ಹೇಳಿಕೆಗೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.