ಚಾಮರಾಜನಗರ: ಚಾನರಾಜನಗರ ಜಿಲ್ಲೆ ಕೊಳ್ಳೇಗಾಲದ ಅಂಜುಮನ್ – ಎ ಇಸ್ಲಾಮಿಯ ಸಂಸ್ಥೆಯ ಆಸ್ತಿ ಮಾರಾಟ ಹುನ್ನಾರ ಆರೋಪದಡಿ ಕ್ರಿಮಿನಲ್ ಕೇಸ್ ದಾಖಲಾಗಿದೆ.. ಸಂಸ್ಥೆ ಅಧ್ಯಕ್ಷ ಸೇರಿ ಮೂವರ ವಿರುದ್ಧ ಕೊಳ್ಳೇಗಾಲ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಜಿಲ್ಲೆಯ ಕೊಳ್ಳೇಗಾಲದ ಬಸ್ತಿಪುರದಲ್ಲಿರುವ ಸರ್ವೇ ನಂ. 125 ರ 8. 36 ಎಕರೆ ಜಮೀನು ಆಸ್ತಿ ಅಂಜುಮಾನ್ – ಎ – ಇಸ್ಲಾಮಿಯಾ ಸಂಸ್ಥೆಗೆ ಸೇರಿದೆ. ಈ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಇದ್ದು , ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ.. ಆದ್ರೆ ಈ ನಡುವೆ ಪ್ರಕರಣದ ಪ್ರತಿವಾದಿಗಳೊಂದಿಗೆ ಆರೋಪಿಗಳು ಶಾಮೀಲಾಗಿ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.

ಜಿಲ್ಲಾ ವರ್ಕ್ಫ್ ಅಧಿಕಾರಿ ಮದೀನಾ ಇಲ್ಯಾಸ್ ನೀಡಿರುವ ದೂರಿನಂತೆ ಆಂಜುಮನ್ – ಎ- ಇಸ್ಲಾಮಿಯ ಸಂಸ್ಥೆಯ ಅಧ್ಯಕ್ಷ ಸಮೀಉಲ್ಲಾ, ಕಾರ್ಯದರ್ಶಿ ಕೆ. ಎಂ ಅನ್ವರ್ ಬಾಷಾ ಹಾಗೂ ಸದಸ್ಯ ವಿ. ಎಸ್. ಝಫ್ರುಲ್ಲಾ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ದಾಖಲೆ ಸಮೇತ ಖಚಿತ ಮಾಹಿತಿ ಆಧರಿಸಿ ವ್ಯಕ್ತಿಯೊಬ್ಬರು ರಾಜ್ಯ ವಕ್ಸ್ ಮಂಡಳಿಗೆ ದೂರು ನೀಡಿದ್ದರು. ಹೀಗಾಗಿ ರಾಜ್ಯ ವಕ್ಸ್ ಮಂಡಳಿ ನಿವೃತ್ತ ಕೆಎಎಸ್ ಅಧಿಕಾರಿ ಮುಜೀಬುಲ್ಲಾ ಝಫಾರಿ ಪ್ರಕರಣದ ವಿಚಾರಣೆ ನಡೆಸಿದ್ದರು. ದೂರಿನಲ್ಲಿ ಸತ್ಯಾಂಶ ಇರೋ ಹಿನ್ನಲೆ ಹಾಗೂ ವಿಚಾರಾಣಾಧಿಕಾರಿ ಶಿಫಾರಸಿನ ಮೇರೆಗೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಚಾಮರಾಜನಗರ ಜಿಲ್ಲಾ ವಕ್ಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಸೂಚನೆಯಂತೆ ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.