ಬೆಂಗಳೂರು: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಬಿಎಂಟಿಸಿ ಭರ್ಜರಿ ದಂಡ ವಸೂಲಿ ಮಾಡಿದೆ. ಜುಲೈ ತಿಂಗಳು ಒಂದರಲ್ಲಿಯೇ 1704 ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದು ಅವರಿಂದ 2 ಲಕ್ಷದ 67 ಸಾವಿರದ 950 ರುಪಾಯಿ ದಂಡ ವಸೂಲಿ ಮಾಡಿದೆ. ಜುಲೈ ತಿಂಗಳುವೊಂದರಲ್ಲಿಯೇ 17 ಸಾವಿರದ 799 ಟ್ರಿಪ್ ಗಳಲ್ಲಿ ಬಿಎಂಟಿಸಿ ತಪಾಸಣೆ ನಡೆಸಿತ್ತು.
ಅಷ್ಟೇ ಅಲ್ಲದೇ ಟಿಕೆಟ್ ನೀಡದ ಕಂಡಕ್ಟರ್ ಗಳ ಮೇಲೂ ಕೇಸ್ ದಾಖಲಿಸಲಾಗಿದ್ದಯ 1188 ಕೇಸ್ ಗಳನ್ನು ದಾಖಲಿಸಲಾಗಿದೆ. ಜೊತೆಗೆ ಮಹಿಳೆಯರಿಗೆ ಮೀಸಲಿಟ್ಟ ಸೀಟ್ ನಲ್ಲಿ ಪ್ರಯಾಣ ಮಾಡಿದ ನಾಲ್ಕು ಪುರುಷ ಪ್ರಯಾಣಿಕರಿಂದ 400 ರುಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಬುಧವಾರ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಒಟ್ಟಾರೆಯಾಗಿ 2021 ಜುಲೈ ತಿಂಗಳಲ್ಲ 1708 ಪ್ರಯಾಣಿಕರಿಂದ ಒಟ್ಟು 2,68,350 ರೂ ದಂಡ ದಂಡವನ್ನು ವಸೂಲಿ ಮಾಡಲಾಗಿದೆ. ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ ಅಥವಾ ದಿನದ ಪಾಸು ಅಥವಾ ಮಾಸಿಕ ಪಾಸು ಪಡೆದು ಪ್ರಯಾಣಿಸಬೇಕು. ಆದ್ರೆ ಈ ನಿಯಮ ಉಲ್ಲಂಘನೆ ಹಿನ್ನಲೆ ದಂಡ ಹಾಕಲಾಗಿದೆ.