ಬೆಂಗಳೂರು: FSL ವರದಿಯಲ್ಲಿ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. FSL ವರದಿ ಬಂದಾಗಿನಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ದೂರವಿದ್ದ ರಾಗಿಣಿ ದ್ವಿವೇದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
“ನೀನು ಅಂದುಕೊಂಡಂತೆ ನಡೆಯದಿದ್ದರೂ ಬೇಸರ ಮಾಡಿಕೊಳ್ಳಬಾರದು. ದೇವರು ನಿಮಗಾಗಿ ಮಾಡಿರುವ ಪ್ಲಾನ್‌ಗಳಲ್ಲಿ ಅಷ್ಟು ವಿಶ್ವಾಸ ಇರಬೇಕು” ಎಂದು ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಮನೆಯಲ್ಲಿಯೇ ರಾಗಿಣಿ ಇದ್ದು FSL ವರದಿ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ದೂರವಾಣಿ ಮೂಲಕ ತಮ್ಮ ಲಾಯರ್ ಜೊತೆ ಸಂಪರ್ಕದಲ್ಲಿರುವ ರಾಗಿಣಿ ಕಾನೂನು ರೀತಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್ ವಿಚಾರವಾಗಿ ನನ್ನನ್ನು 100ರಷ್ಟು ಟಾರ್ಗೆಟ್ ಮಾಡಲಾಗ್ತಿದೆ ಎಂದು ಈ ಹಿಂದೆ ರಾಗಿಣಿ ಹೇಳಿದ್ದರು. ಸದ್ಯ ಬರೋಬ್ಬರಿ 10 ತಿಂಗಳ ನಂತರ ವರದಿ ಬಂದಿದ್ದು ಚಾರ್ಜ್‌ಶೀಟ್‌ನಲ್ಲಿಯೂ ಈ ವರದಿಯ ಕುರಿತು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಜಾಮೀನಿನ ಮೇಲೆ ಹೊರಗೆ ಬಂದ ನಟಿ ಮತ್ತೆ ಜೈಲು ಸೇರಲಿದ್ದಾರಾ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.