Plane hijacked
ನವದೆಹಲಿ: ಅಫ್ಘಾನಿಸ್ಥಾನದಲ್ಲಿರುವ ಉಕ್ರೇನ್ ಜನರನ್ನು ಸ್ಥಳಾಂತರಿಸಲು ಆಗಮಿಸಿದ್ದ ಉಕ್ರೇನ್ ವಿಮಾನವನ್ನು ಉಗ್ರರು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಕಾಬೂಲ್ನಿಂದ ಪ್ರಯಾಣಿಕರೊಂದಿಗೆ ಹಾರುತ್ತಿದ್ದ ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಕದ್ದೊಯಲಾಗಿದೆ ಎನ್ನಲಾಗಿದೆ.

ಅಫ್ಘಾನಿಸ್ತಾನದಿಂದ ಭಾನುವಾರ ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನಿಯನ್ ವಿಮಾನ
ಕಾಬೂಲ್ ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಬಳಿಕ
ಶಸ್ತ್ರಾಸ್ತ್ರ ಸಜ್ಜಿತ ತಂಡದಿಂದ ವಿಮಾನ ಅಪಹರಣ ಮಾಡಿ ಇರಾನ್ ಗೆ ವಿಮಾನ ಕದ್ದೊಯ್ದಿದಿರುವ ಬಗ್ಗೆ ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಮಾಹಿತಿ ನೀಡಿದ್ದಾರೆ. 83 ಪ್ರಯಾಣಿಕರು ಈ ಉಕ್ರೇನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಇರಾನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ, ಅದು ಇಂಧನ ಭರ್ತಿಗೆ ಬಂದಿದ್ದು ಅದೀಗ ಉಕ್ರೇನ್ ಕಡೆಗೆ ನಿರ್ಗಮಿಸಲಿದೆ ಎಂದು ಹೇಳಿಕೆ. ಹೀಗಾಗಿ ಉಕ್ರೇನ್ ವಿಮಾನದ ಹೈಜಾಕ್ ಬಗ್ಗೆ ಗೊಂದಲಗಳು ಮುಂದುವರಿದಿದ್ದು ಭದ್ರತೆಯ ನಡುವೆ ವಿಮಾನ ನಾಪತ್ತೆಯಾಗಿದ್ದೇಗೆ ಎಂದು ತನಿಖೆ ಮಾಡಲಾಗುತ್ತಿದೆ.
Ukrainian plane hijacked Kabul Afghanistan