ಮುಂಬೈ : ಅಫ್ಘಾನಿಸ್ತಾನ ದೇಶದ ಇಂದಿನ ಪರಿಸ್ಥಿತಿಯನ್ನು ಕಂಡು ನನಗೆ ಆಘಾತವಾಗಿದೆ ಎಂದು ಅಫ್ಘಾನ್ ಮೂಲದ ಬಾಲಿವುಡ್ ನಟಿ ಸೆಲಿನಾ ಜೇಟ್ಲೀ ಮರುಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನನ್ನ ಕುಂಟುಂಬ ಅಫ್ಘಾನ್ ತೊರೆದಿದ್ದಾರೆ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
ಸದ್ಯ ಈಗಲೂ ನಾನು ಅಫ್ಘಾನಿಸ್ತಾನದಲ್ಲಿ ನಿಕಟ ಸಂಬಂಧ ಹೊಂದಿದ್ದು ನನ್ನ ಪರಿಚಯಸ್ಥರು, ಅನೇಕರು ಅಫ್ಘಾನಿಸ್ತಾನಲ್ಲಿ ವಾಸವಾಗಿದ್ದಾರೆ, ಇವರೆಲ್ಲರೂ ಸದ್ಯದ ಪರಿಸ್ಥಿತಿಯನ್ನು ಕಂಡು ತುಂಬಾ ಭಯದಲ್ಲಿ ಜೀವನ ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಿದ್ದು ತಾಲಿಬಾನ್‌ನಿಂದ ಹೊರಬರಲು ಯತ್ನಿಸುತ್ತಿದ್ದಾರೆ ಎಂದು ಸೆಲಿನಾ ಹೇಳಿದ್ದಾರೆ
ಇಪತ್ತು ವರ್ಷಗಳಿಂದ ಅಫ್ಘಾನಿಸ್ತಾನ ಸಾಕಷ್ಟು ಬದಲಾವಣೆ ಕಂಡುಕೊಂಡ ದೇಶವಾಗಿತ್ತು, ಶಿಕ್ಷಣ, ಸಿನಿಮಾ, ಕ್ರೀಡೆ ಹಾಗೂ ಜಗತ್ತಿಗೆ ಉತ್ತಮ ಕೊಡುಗೆ ನೀಡುತ್ತಿದ್ದ ರಾಷ್ಟ್ರವಾಗಿತ್ತು ಆದರೆ ಈ ಸ್ಥಿತಿ ನನ್ನ ದೇಶಕ್ಕೆ ಬರುತ್ತೆ ಎಂದು ಉಹಿಸಿರಲಿಲ್ಲ ಎಂದು ಸೆಲಿನಾ ಬೇಸರ ವ್ಯಕ್ತಪಡಿಸಿದರು.
ಸೆಲಿನಾ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು ಕೆಲವು ವರ್ಷಗಳಿಂದ ಅವರು ಬಾಲಿವುಡ್ ಸಿನಿಮಾದಿಂದ ದೂರವಾಗಿದ್ದಾರೆ ಆದರೆ ಅಫ್ಘಾನಿಸ್ತಾನ ಈ ದೇಶದ ಪರಿಸ್ಥಿತಿಯನ್ನು ಕಂಡು ಸೆಲಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಜಿಂದಾ, ಗೋಲ್ಮಲ್ ರಿಟರ್ನ್ಸ್, ಚಾಯ್ ಗರಮ್, ಹಲೋ ಡಾರ್ಲಿಂಗ್, ಜವಾನಿ ದಿವಾನಿ ಇನ್ನೂ ಅನೇಕ ಬಾಲಿವುಡ್ ಹಿಂದಿ ಸಿನಿಮಾಗಳಲ್ಲಿ ಸೆಲಿನಾ ನಟಿಸಿದ್ದಾರೆ.