ಬೆಂಗಳೂರು: ಕೋವಿಡ್ ಹಿನ್ನಲೆ ಕಳೆದ 18 ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಇಂದಿನಿಂದ ಆರಂಭವಾಗಿವೆ. ಮೊದಲ ಹಂತದಲ್ಲಿ 9 ರಿಂದ 12 ತರಗತಿ ಆರಂಭವಾಗಿವೆ. ಕೋವಿಡ್ ಪಾಸಿಟಿವ್ ರೇಟ್ 2% ಕ್ಕಿಂತ ಹೆಚ್ಚಿರುವ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ – ಕಾಲೇಜು ಆರಂಭವಾಗಿವೆ.
ಕೋವಿಡ್ ಪಾಸಿಟಿವ್ ರೇಟ್ 2% ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಹಾಸನ, ಉಡುಪಿ ಜಿಲ್ಲೆಗಳನ್ನೂ ಹೊರತು ಪಡಿಸಿ ಉಳಿದಂತೆ 26 ಜಿಲ್ಲೆಗಳಲ್ಲಿ ಶಾಲೆ ಆರಂಭವಾಗಿವೆ. ಒಟ್ಟು 16 ಸಾವಿರ ಶಾಲೆಗಳು ೫ ಸಾವಿರ ಕಾಲೇಜು ಒರೋಬ್ಬರಿ ಒಂದುವರೆ ವರ್ಷದ ಬಳಿಕ ಬಾಗಿಲು ತೆರೆದಿವೆ. 9 ಹಾಗೂ 10 ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿದರೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭಿಸಲು 5492 ಪದವಿ ಕಾಲೇಜುಗಳು ಸಜ್ಜಾಗಿವೆ.
ಶಿಕ್ಷಣ ಇಲಾಖೆ ಕೊರೋನಾ ಮಾರ್ಗಸೂಚಿ ಪಾಲನೆ ಕಡ್ಡಾಯ
ಕೊರೊನಾ ಮೂರನೇ ಅಲೆಯ ಮಧ್ಯೆಯು ಶಾಲೆ ಆರಂಭಿಸಲು ನಿರ್ಧರಿಸಿರೋ ಹಿನ್ನಲೆ ಈಗಾಗ್ಲೇ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಎಲ್ಲಾ ಶಾಲಾ ಕಾಲೇಜುಗಳು SOP ಕಡ್ಡಾಯವಾಗಿ ಪಾಲನೆ ಮಾಡಲು ಆದೇಶ ನೀಡಲಾಗಿದೆ. ಭೌತಿಕ ತರಗತಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ಆನ್ ಲೈನ್, ಆಫ್ ಲೈನ್ ಎರಡಲ್ಲೂ ತರಗತಿ ನಡೆಯಲಿದ್ದು, 50:50 ಅನುಪಾತದಲ್ಲಿ ಭೌತಿಕ ತರಗತಿ ನಡೆಸಲು ತಿಳಿಸಲಾಗಿದೆ. ಬ್ಯಾಚ್ ಆಧಾರದಲ್ಲಿ ತರಗತಿಗಳು ನಡೆಯಲಿದ್ದು ಮೊದಲ ಮೂರು ದಿನ 50% ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಕೊನೆಯ ಮೂರು ದಿನಾ ಉಳಿದ 50% ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತೆ.