ಅಫ್ಘಾನಿಸ್ತಾನ : ತಾಲಿಬಾನ್ ಹಿಡಿತದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂಕಷ್ಟದ ಮಧ್ಯಯೇ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಣಯ ತೆಗೆದುಕೊಂಡಿದ್ದು ಮುಂದಿನ ತಿಂಗಳಲ್ಲಿ ಶ್ರೀಲಾಂಕದಲ್ಲಿ ನಡೆಯಲ್ಲಿರುವ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸೆಣಸಲಿದೆ.
ಈ ಮಾಹಿತಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ) ಟ್ವೀಟ್ ಮಾಡುವ ಖಚಿತ ಪಡಿಸಿದ್ದು
ಸಂಕಷ್ಟದಲ್ಲಿ ಸಿಲುಕಿರುವ ಅಫ್ಘಾನಿಸ್ತಾನವು ಕ್ರಿಕೆಟನಲ್ಲಿ ಇಡೀ ವಿಶ್ವದಲ್ಲೇ ಗುರುತಿಸಿಕೊಂಡಿರುವ ರಾಷ್ಟ್ರವಾಗಿದೆ. ಸ್ಪಿನ್ ಬಾಲರ್ ರಸೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಸದ್ಯ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದ ವೀಸಾ ನೀಡಲಾಗಿದ್ದು ಮುಂದಿನ ತಿಂಗಳು ಶ್ರೀಲಂಕಾದಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಹೊಸ ಅಧ್ಯಕ್ಷ
ಮಾಜಿ ಮುಖ್ಯಸ್ಥ ಅಜೀಜುಲ್ಲಾ ಫಜ್ಲೀ ಭಾನುವಾರ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ತಾಲಿಬಾನ್ ಸಂಘರ್ಷ ಪೀಡಿತ ರಾಷ್ಟ್ರವನ್ನು ಸ್ವಾಧೀನಪಡಿಸಿಕೊಂಡ ನಂತರ ಆಡಳಿತ ಮಂಡಳಿಯಲ್ಲಿ ಮೊದಲ ಹೊಸ ನೇಮಕಾತಿಯಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ನೂತನ ಕಾರ್ಯಾಧ್ಯಕ್ಷರಾಗಿರುವ ಇವರನ್ನು ತಾಲಿಬಾನ್ ನಿಯಮದ ಅಡಿಯಲ್ಲಿ ನೇಮಕ ಮಾಡಲಾಗಿದೆ.