ಮೊಹರಂ ಹಬ್ಬದ ಪ್ರಯುಕ್ತ ಬಿಬಿಎಂಪಿ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿರುವ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅವರು, ನಾವು ಜಾಗರೂಕರಾಗಿದ್ದು ಮತ್ತು ಅಗತ್ಯ ಕೋವಿಡ್ ಸೂಕ್ತ ಕ್ರಮಗಳನ್ನು ಅನುಸರಿಸೋಣ ಮತ್ತು ಈ ಮೂಲಕ ಕೋವಿಡ್19 ಸೋಂಕು ಹರಡುವುದನ್ನು ತಡೆಯೋಣ ಎಂದು ತಿಳಿಸಿದ್ದಾರೆ.
ಮೊಹರಂ ಹಬ್ಬದ ಕೋವಿಡ್ ಮಾರ್ಗಸೂಚಿಗಳು ಹೀಗಿವೆ..
ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು ಅಥವಾ ಪಾಂಜವನ್ನು ಸ್ಥಾಪಿಸುವುದು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ.
ಆಗಸ್ಟ್ 12 ರಿಂದ ಆಗಸ್ಟ 20ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ
ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಭಕ್ತಾದಿಗಳು ಸೂಕ್ತ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು
ಪಾಂಜ/ಆಲಂ ಮತ್ತು ತಾಜಿಯಾಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದ ನೋಡಬೇಕು
ಖಬರಸ್ಥಾನ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ.
ಖಬರಸ್ಥಾನಗಳಿಗೆ ಕೇವಲ ದಫನ ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ.
ಮುಂಬರುವ ಮೊಹರಂ ಹಬ್ಬದ ಸಂದರ್ಭದಲ್ಲಿ ಅಗತ್ಯವಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳು ಇಲ್ಲಿವೆ. ನಾವು ಜಾಗರೂಕರಾಗಿದ್ದು ಮತ್ತು ಅಗತ್ಯ ಕೋವಿಡ್ ಸೂಕ್ತ ಕ್ರಮಗಳನ್ನು ಅನುಸರಿಸೋಣ ಮತ್ತು ಈ ಮೂಲಕ ಕೋವಿಡ್19 ಸೋಂಕು ಹರಡುವುದನ್ನು ತಡೆಯೋಣ. #BBMPFightsCovid19 pic.twitter.com/tlOWJd9ixC
— Gaurav Gupta (@BBMPCOMM) August 18, 2021
ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು
ಕೋವಿಡ್-೧೯ ಸಮುಚಿತ ವರ್ತನೆಗಳೊಂದಿಗೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು, ಒಂದು ವೇಳೆ ಹೆಚ್ಚು ಜನರು ಆಗಮಿಸಿದ್ದಲ್ಲಿ, ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು
ಕೋವಿಡ್-೧೯ ಸಮುಚಿತ ವರ್ತನೆಯಂತೆ ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಮಧ್ಯ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು
ಆಗಾಗ ಕೈಗಳನ್ನು ಸೋಪು ಮತ್ತು ಸ್ಯಾನಿಟೈಸರ್‌ಗಳಿಂದ ಶುಚಿಗೊಳಿಸಬೇಕು ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡತಕ್ಕದ್ದು
ಭಕ್ತಾದಿಗಳು ಪ್ರವೇಶಿಸುವ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ತಡೆಗಟ್ಟಬೇಕು. ಆಡಳಿತ ಮಂಡಳಿ ಅಥವಾ ಆಡಳಿತಾಧಿಕಾರಿಗಳು ಭಕ್ತಾದಿಗಳು ಕುಳಿತುಕೊಳ್ಳುವ ಗರಿಷ್ಠ ಸಂಖ್ಯೆಯನ್ನು ಮುಖ್ಯದ್ವಾರದ ಬಳಿ ಪ್ರದರ್ಶಿಸಬೇಕು.
ಪರಸ್ಪರ ಹಸ್ತಲಾಗವ ಮತ್ತು ಆಲಿಂಗನವನ್ನ ಮಾಡುವಂತಿಲ್ಲ
ಮಸೀದಿಗಳಲ್ಲಿ ಪ್ರಾರ್ಥನೆಗೆ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಲಾ(ಜಾಯನಮಾಜ್) ಕಡ್ಡಾಯವಾಗಿ ತರತಕ್ಕದ್ದು
ಮಸೀದಿಗಳನ್ನ ಹೊರತುಪಡಿಸಿ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿಮಹಲ್ ಮತ್ತಿತರ ಜಾಗಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ.
ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುವುದಿಲ್ಲ
ಭಕ್ತಾದಿಗಳು ಯಾವ ಯಾವ ಕೆಲಸವನ್ನು ನಿರ್ವಹಿಸುವುದು ಅಥವಾ ಯಾವ ಯಾವ ಕೆಲಸವನ್ನು ನಿರ್ವಹಿಸಬಾರದು ಎಂಬ ಬಗ್ಗೆ ಧ್ವನಿವರ್ಧಕದ ಮೂಲಕ ಸೂಚಿಸಬೇಕು
ಈ ಮೇಲ್ಕಂಡಂತೆ ಮೊಹರಂ ಹಬ್ಬಕ್ಕೆ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿದೆ.