ಅಫ್ಘಾನಿಸ್ತಾನ( ಅ .16): ಕಾಬೂಲ್‌ನ ವಿಮಾನ ನಿಲ್ದಾಣ ಬಸ್ ಸ್ಟ್ಯಾಂಡ್ ರೀತಿ ಭಾಸವಾಗುತ್ತಿದೆ. ಭಾನುವಾರ ತಾಲಿಬಾನ್ (taliban) ಸಂಘಟನೆ ಅಫ್ಘಾನಿಸ್ತಾನ (Afghanistan) ರಾಷ್ಟ್ರಪತಿ ಭವನದ ಮೇಲೆ ಹಿಡಿತ ಸಾಧಿಸಿದ ನಂತರ ಅಲ್ಲಿನ ಹುಟ್ಟು ಬೆಳೆದ ರಾಷ್ಟ್ರದಿಂದ ಪಲಾಯನಗೈಯುತ್ತಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದ್ದು, ಈಗಾಗಲೇ ಮಿಲಟರಿ ಸೇರಿ ಸಾವಿರಾರು ನಾಗರೀಕರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಸರ್ಕಾರ ರಚನೆಯಾಗಲಿದೆ. ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರುಲ್ಲಾ ಸಲೇಹ್ ಸಹ ದೇಶದಿಂದ ಪಲಾಯನ ಮಾಡಿದ್ದಾರೆ. ಪರಿಸ್ಥಿತಿ ಹದಗೆಟ್ಟ ಕಾರಣ, ಜನರು ಇಲ್ಲಿಂದ ವಲಸೆ ಹೋಗುತ್ತಿದ್ದಾರೆ.
Desperate situation unfolding at #Kabul airport this morning. pic.twitter.com/JlAWtTHPBy
— Ahmer Khan (@ahmermkhan) August 16, 2021
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನ ಓಡಿ ಹೋಗಿ ವಿಮಾನ ಹತ್ತಲು ಪ್ರಯತ್ನಿಸುತ್ತಿರುವ ವಿಡಿಯೋಗಳು ವಿಶ್ವದೆಲ್ಲೆಡೆ ವೈರಲ್ ಆಗುತ್ತಿವೆ. ಕಾಬೂಲ್ ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಆಗದೆ ಜನರು ಪರದಾಡುತ್ತಿದ್ದಾರೆ.
More pictures from Kabul Airport. People want to just leave Afghanistan for whatever it takes for an air ticket. pic.twitter.com/MU46GhI0PZ
— Sudhir Chaudhary (@sudhirchaudhary) August 16, 2021
ಕಾಬೂಲ್ ನ ಬ್ಯಾಂಕುಗಳ ಮುಂದೆ ಉದ್ದವಾದ ಸರತಿ ಸಾಲುಗಳು
ಕಾಬೂಲ್‌ನಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಜನರು ದೇಶವನ್ನು ತೊರೆಯುವ ಆತುರದಲ್ಲಿ ಬ್ಯಾಂಕುಗಳಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ವೀಸಾ ಪಡೆಯಲು ಅನೇಕ ಜನರು ತಮ್ಮ ದೇಶಗಳ ರಾಯಭಾರ ಕಚೇರಿಯನ್ನು ಸುತ್ತುತ್ತಿದ್ದಾರೆ. ಕಾಬೂಲ್‌ನ ಬ್ಯಾಂಕ್‌ಗಳು ಮತ್ತು ರಾಯಭಾರ ಕಚೇರಿಗಳ ಮುಂದೆ ಜನರ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿದೆ.
Latest pictures from Kabul Airport. People are on their own now while the world watches in silence. Only sane advise to Afghan people…RUN pic.twitter.com/RQGw28jFYx
— Sudhir Chaudhary (@sudhirchaudhary) August 16, 2021
ಇಷ್ಟು ಸುಲಭದ ಗೆಲುವು ಸಿಗುತ್ತದೆ ಎಂದು ಭಾವಿಸಿರಲಿಲ್ಲ-ತಾಲಿಬಾನ್
ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ರಾಜಿನಾಮೆ ನೀಡಿ ಪಲಾಯನ ಮಾಡಿದ ನಂತರ ತಾಲಿಬಾನ್ ರಾಷ್ಟ್ರಪತಿ ಭವನವನ್ನೂ ವಶಪಡಿಸಿಕೊಂಡಿದೆ. ನಂತರ ಹೇಳಿಕೆ ಬಿಡುಗಡೆ ಮಾಡಿದ ತಾಲಿಬಾನ್, ಎಲ್ಲ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ನಾವು ಇಷ್ಟು ಸುಲಭವಾಗಿ ಮತ್ತು ಇಷ್ಟು ಬೇಗ ಗೆಲ್ಲುತ್ತೇವೆ ಎಂದು ಯೋಚಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ಹೇಳಿದ್ದಾರೆ.
Rush for the last flight at Kabul Airport. pic.twitter.com/Z6M26uhPeQ
— Sudhir Chaudhary (@sudhirchaudhary) August 16, 2021