ಅಫ್ಘಾನಿಸ್ತಾನ(Afghanistan) (ಅ.16); ತಾಲಿಬಾನ್ ಸಂಘಟನೆಯು ಅಫ್ಘಾನಿಸ್ತಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇದರಿಂದ ಭಯಭೀತಗೊಂಡಿರುವ ಅಲ್ಲಿನ ಜನ ದೇಶ ತೊರೆಯಲು ಮುಂದಾಗುತ್ತಿದ್ದಾರೆ. ನಿನ್ನೆಯಿಂದಲೂ ಸಾವಿರಾರು ಜನರು ದೇಶ ತೊರೆಯುತ್ತಿದ್ದಾರೆ. ಈ ನಡುವೆ ಕಾಬುಲ್ ವಿಮಾನ ನಿಲ್ದಾಣದಿಂದ ಆಘಾತಕಾರಿ ದೃಶ್ಯಗಳು ಹೊರಬರುತ್ತಿವೆ.
Two persons fell from plane after hanging on landing gear near Kabul airport. My prayers are with Kabul. #KabulHasFallen #Kabul #KabulFalls #kabulairport #USAabandonedAfghanistan pic.twitter.com/pOW1Js7gHI
— Mehran (@Mehrantweets_) August 16, 2021
ಕಾಬೂಲಿನ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣ ಅವ್ಯವಸ್ಥೆಯ ಗೂಡಾಗಿದೆ. ಈ ನಡುವೆ ಕಾಬುಲ್‌ನಿಂದ ಟೇಕಾಫ್ ಆಗಿದ್ದ ವಿಮಾನದಿಂದ ಇಬ್ಬರು ವ್ಯಕ್ತಿಗಳು ಹಾರಿ ಮೃತಪಟ್ಟಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಲ್ಲದೆ, ಯುಎಸ್ ಮಿಲಿಟರಿ ವಿಮಾನವು ಟೇಕಾಫ್ ಮಾಡುತ್ತಿರುವಾಗ ಜನರು ಅದರ ಕೆಳಗಡೆ ಓಡುತ್ತಿದ್ದಾಗ ಇಬ್ಬರು ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
A human rights activist right now at the airport in #Kabul: Even random people inside the airport are insulting us.Guy just came to us, ordered me to put my scarf on, after I didnt accept, he warned me that he will use his knife to make me put my scarf on.Even here I’m not secure pic.twitter.com/gxZdQZDmRZ
— Natalie Amiri (@NatalieAmiri) August 16, 2021
ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಜರಿದ್ದ ಯುಎಸ್ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಕಾಬುಲ್ ವಿಮಾನನಿಲ್ದಾಣದಲ್ಲಿ ಸುಮಾರು ಐದು ಜನರು ಮೃತಪಟ್ಟಿದ್ದಾರೆ ಎಂದು ಸಹ ವರದಿಯಾಗಿದೆ.