ನವದೆಹಲಿ : ಅಫ್ಘಾನಿಸ್ತಾನದಲ್ಲಿ ನರಕ ಸೃಷ್ಟಿಸಿರುವ ತಾಲಿಬಾನ್ ಹೋರಾಟಗಾರರು ಕೊನೆಗೂ ರಾಜಧಾನಿ ಕಾಬೂಲ್ ಪ್ರವೇಶ ಮಾಡಿದ್ದು ಸುತ್ತಲಿನಿಂದ ಆವರಿಸಿಕೊಂಡಿದ್ದಾರೆ. ಭಾರಿ ಸಂಖ್ಯೆಯಲ್ಲಿ ಕಾಬೂಲ್ ಪ್ರವೇಶ ಮಾಡಿದ್ದು ಅಧಿಕಾರ ಹಸ್ತಾಂತರಕ್ಕಾಗಿ ಸರ್ಕಾರದ ಜೊತೆಗೆ ಮಾತುಕತೆಗೆ ತಾಲಿಬಾನ್ ಮುಂದಾಗಿದೆ.

ಈ ಬಗ್ಗೆ ಅಫ್ಘಾನಿಸ್ತಾನ ಸರ್ಕಾರದ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದು ತಾಲಿಬಾನಿಗಳು ಕಾಬೂಲ್ ನಗರವನ್ನು ಸುತ್ತಲಿನಿಂದ ಆಕ್ರಮಿಸಿಕೊಂಡಿದ್ದು ಅವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದು ಅಂತರಾಷ್ಟ್ರೀಯ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ. ಕಾಬೂಲ್ ಅಧ್ಯಕ್ಷರ ಕಚೇರಿ ಈ ಬಗ್ಗೆ ಟ್ವಿಟ್ ಮಾಡಿದ್ದು ಕಾಬೂಲ್ ಸುತ್ತಲಿನ ಪ್ರದೇಶದಿಂದ ಗುಂಡಿನ ಸದ್ದು ಕೇಳಿ ಬರುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನಿನ್ನೆ ಅಫ್ಘಾನ್ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಫ್ಘಾನ್ ಸರ್ಕಾರ ಸೇನೆಯನ್ನು ಸಜ್ಜುಗೊಳಿಸುತ್ತಿದೆ ಮತ್ತು ಪರಿಸ್ಥಿತಿ ಇನ್ನು ಮುಂದೆ ಉಲ್ಬಣಗೊಳ್ಳಲು ಬಿಡುವುದಿಲ್ಲ ಎಂದು ಹೇಳಿದ ಹೇಳಿದ್ದರು. ಆದರೆ ಈ ಘಟನೆ ಬೆನ್ನಲೆ ಇಂದು ತಾಲಿಬಾನಿಗಳು ಕಾಬೂಲ್ ನಗರವನ್ನು ಸುತ್ತುವರೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ತಾಲಿಬಾನ್ ವಕ್ತಾರರು, ಜನರು ಭೀತಿಗೊಳ್ಳುವುದು, ನಗರ ಬಿಟ್ಟು ತೆರಳವುದು ಬೇಡ. ಶಾಂತಿಯುತವಾಗಿ ಅಧಿಕಾರ ಪಡೆದುಕೊಳ್ಳಲಿದ್ದೇವೆ ಈ ಬಗ್ಗೆ ಸರ್ಕಾರದ ಜೊತೆಗೆ ದೋಹಾದಲ್ಲಿ ಮಾತುಕತೆ ನಡೆಯುತ್ತಿದ್ದು ಜನರ ಜೀವಕ್ಕೆ ದಕ್ಕೆ ಮಾಡದೇ ಅಧಿಕಾರ ಪಡೆಯುವುದಾಗಿ ಹೇಳಿದ್ದಾರೆ. ಅಫ್ಘಾನ್ ಸರ್ಕಾರ ತನ್ನೇಲ್ಲ ಅಸ್ತಿತ್ವ ಕಳೆದುಕೊಂಡಿದ್ದು ಬಹುತೇಕ ಅಧಿಕಾರ ಹಸ್ತಾಂತರ ಮಾಡುವ ಸಾಧ್ಯತೆಗಳಿದೆ.