ದೆಹಲಿ: ಭಾರತದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನ ನಿಷೇಧ ಮಾಡಲಾಗಿದೆ. ಸೆಪ್ಟೆಂಬರ್ 30ರಿಂದ ಮೊದಲ ಹಂತದಲ್ಲಿ ನಿಷೇಧ ಮಾಡಲಾಗಿದ್ದು, 2022ರ ಜುಲೈ 1ರಿಂದ ಸಂಪೂರ್ಣ ನಿಷೇಧ ಮಾಡಲಾಗಿದೆ. ಕಪ್ಗಳು, ತಟ್ಟೆಗಳು ಮತ್ತು ಸ್ಟ್ರಾಗಳಂತಹ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆ ನಿಷೇಧವಾಗಿದೆ.
ಇದನ್ನೂ ಓದಿ: https://seculartvkannada.com/2021/08/14/vehicle-scrappage-policy-how-much-profit-is-the-gujari-policy-for-people/
ಇನ್ಮುಂದೆ ಮದುವೆ, ಕಾರ್ಯಕ್ರಮಗಳು, ಹೋಟೆಲ್ಗಳು, ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಲೋಟ-ತಟ್ಟೆ ಬಳಸುವಂತಿಲ್ಲ. ಇವುಗಳನ್ನು ತಯಾರಿಸಿ ಮಾರಾಟ ಮಾಡುವುದು ದಂಡ ಮತ್ತು ಶಿಕ್ಷೆಗೆ ಅರ್ಹವಾದ ಅಪರಾಧವಾಗಲಿದೆ. ಈ ನಿಯಮ ಕಾಂಪೋಸ್ಟ್ ಮಾಡಬಹುದಾದ ಪ್ಲಾಸ್ಟಿಕ್‌ನಿಂದ ಮಾಡಿದ ಚೀಲಗಳನ್ನು ಬಳಸಲು ಅನ್ವಯಿಸುವುದಿಲ್ಲ.

ಸರ್ಕಾರವು ಪಾಲಿಥಿನ್ ಚೀಲಗಳ ದಪ್ಪವನ್ನು 50 ಮೈಕ್ರಾನ್‌ಗಳಿಂದ 120 ಮೈಕ್ರಾನ್‌ಗಳಿಗೆ ಹೆಚ್ಚಿಸಿದೆ. ಪಾಲಿಥಿನ್ ಬ್ಯಾಗ್ಗಳ ದಪ್ಪದಲ್ಲಿನ ಬದಲಾವಣೆಯನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದೆ. ಅಲ್ಲದೆ, ಮೊದಲ ಹಂತವು ಸೆಪ್ಟೆಂಬರ್ 30 ರಂದು ಆರಂಭವಾಗಲಿದ್ದು, 75 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಚೀಲಗಳ ಮೇಲೆ ನಿಷೇಧ ಹೇರಲಾಗುತ್ತದೆ. 120 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಬ್ಯಾಗ್‌ಗಳನ್ನು ಡಿಸೆಂಬರ್ 31, 2022 ರಿಂದ ನಿಷೇಧಿಸಲಾಗುವುದು.
The manufacturing, import, stocking, distribution, sale and use of several single-use plastics will be prohibited with effect from the 1st of July of next year.#BanSingleUsePlastic #Environment #EcoFriendly https://t.co/oP9ejbzAXv
— Organiser Weekly (@eOrganiser) August 14, 2021