ಹೊಸಪೇಟೆ : ಸೂಕ್ತ ಖಾತೆ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಬಂಡಾಯ ಸಾರಿದ್ದ ಹೊಸಪೇಟೆ ಕ್ಷೇತ್ರದ ಶಾಸಕ, ಸಚಿವ ಆನಂದ್ ಸಿಂಗ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳ ಹಿಂದೆ ಎಚ್ಚರಿಕೆ ನೀಡಿದ್ದ ಅವರು, ಖಾತೆ ಬದಲಾವಣೆಗೆ ಸಿಎಂ ಒಪ್ಪದ ಹಿನ್ನಲೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ನಿರ್ಧಾರದ ಬೆನ್ನಲೆ ಹೊಸಪೇಟೆಯಲ್ಲಿರುವ ತಮ್ಮ ಶಾಸಕರ ಕಚೇರಿ ಬಂದ್ ಮಾಡಿರುವ ಆನಂದ್ ಸಿಂಗ್, ಅಲ್ಲಿದ್ದ ಎಲ್ಲ ಫ್ಲಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಶಾಸಕರ ಸೂಚನೆ ಹಿನ್ನಲೆ ಸ್ಥಳೀಯ ಸಿಬ್ಬಂದಿ ಇಡೀ ಕಚೇರಿಯಲ್ಲಿದ್ದ ಫ್ಲಕ್ಸ್ ಹೋರ್ಡಿಂಗ್‌ಗಳನ್ನು ತೆರವು ಮಾಡಿದ್ದಾರೆ.
ಆನಂದ್ ಸಿಂಗ್ ರೆಬಲ್ ಆಗಿರುವ ಸುದ್ದಿ ಕೇಳಿದ್ದಂತೆ ಸಿಎಂ ಬೊಮ್ಮಾಯಿ ದೂರವಾಣಿ ಮೂಲಕ ಸಂಪರ್ಕ ಮಾಡಲು ಪ್ರಯತ್ನಪಟ್ಟಿದ್ದು ಕರೆ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಸದ್ಯ ಆನಂದ್ ಸಿಂಗ್ ಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯನ್ನು ನೀಡಲಾಗಿದೆ. ಇದನ್ನು ಬದಲಿಸುವಂತೆ ಆನಂದ್ ಸಿಂಗ್ ಪಟ್ಟು ಹಿಡಿದಿದ್ದಾರೆ.