ಬೆಂಗಳೂರು(ಅ.೮) ನಾನು ಟಿಪ್ಪು ಸುಲ್ತಾನ್ ಜಯಂತಿ ಮಾಡಿದಾಗ ನನ್ನನ್ನು ಹಿಂದು ವಿರೋಧಿ ಎಂದು ಬಿಂಬಿಸಿದರು. ಟಿಪ್ಪು ರಾಜ್ಯದಲ್ಲಿ ದಿವಾನರಾಗಿದ್ದವರು ಯಾರು? ಅವರು ಯಾವ ಜಾತಿಗೆ ಸೇರಿದವರು? ಟಿಪ್ಪು ಆಡಳಿತದಲ್ಲಿ ಹಣಕಾಸು ಜವಾಬ್ದಾರಿ ನಿಭಾಯಿಸಿದ್ದ ಕೃಷ್ಣಸ್ವಾಮಿ ಅವರು ಯಾವ ಜಾತಿಗೆ ಸೇರಿದವರು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ https://seculartvkannada.com/2021/08/09/another-name-for-the-sacrifice-is-the-congress-siddaramaiah/
ಇಂದು ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೊಘಲರ 600 ವರ್ಷಗಳ ಆಳ್ವಿಕೆ ಕಾಲದ ಅಷ್ಟೂ ಸಮಯದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ. ಟಿಪ್ಪು ಆಡಳಿತ ಅವಧಿಯಲ್ಲಿ ನಾಲ್ಕು ಯುದ್ಧಗಳು ನಡೆದವು, ಅದು ಬ್ರಿಟೀಷರ ವಿರುದ್ಧವಾಗಿತ್ತು. ಟಿಪ್ಪು ಯಾವ ದೇಶ ದ್ರೋಹ ಮಾಡಿದ್ದ ಅಂತಾ ಯಾರಾದರೂ ಹೇಳುತ್ತಾರಾ? ಇಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ವ್ಯಕ್ತಿ ಜಯಂತಿ ಮಾಡಿದರೆ ನಿಮಗ್ಯಾಕೆ ಕೋಪ? ಬಿಜೆಪಿಯವರಿಗೆ ಪೂರ್ಣಯ್ಯ ಅವರ ಮೇಲೆ ಕೋಪ ಇಲ್ಲ, ಹೇಗಿದೆ ನೋಡಿ ಬಿಜೆಪಿಯ ದ್ವಂಧ್ವ ನೀತಿ. ಇದರಲ್ಲೇ ಬಿಜೆಪಿಗರು ಎಂತಹ ನೀಚರು ಎಂದು ಸಾಬೀತಾಗುತ್ತದೆ ಎಂದರು.
ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು 4 ಮಹಾಯುದ್ಧಗಳನ್ನು ಮಾಡಿದ್ದರು. ಟಿಪ್ಪು ಜಯಂತಿ ಮಾಡಿದರೆ @BJP4Karnataka ದವರಿಗೆ ಕೋಪ ಬರುತ್ತೆ.
— Siddaramaiah (@siddaramaiah) August 9, 2021
ಬಿಜೆಪಿಯವರಿಗೆ ಟಿಪ್ಪು ಮೇಲಿರುವ ಕೋಪ ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನ ಮೇಲೆ ಏಕಿಲ್ಲ? 10/13#QuitIndiaMovement
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಗರು ಇಂದು ನಮಗೆ, ದೇಶ, ದೇಶ ಭಕ್ತಿ, ರಾಷ್ಟ್ರೀಯತೆ ಬಗ್ಗೆ ಪಾಠ ಹೇಳಿಕೊಡಲು ಬರುತ್ತಿದ್ದಾರೆ. ಇದಕ್ಕೆ ನಾವು ಹೇಳೋಣ? ಕೇವಲ ಜನರಿಗೆ ಸುಳ್ಳು ಹೇಳಿ, ದಾರಿ ತಪ್ಪಿಸಿ ದೇಶವನ್ನು ಛಿದ್ರ ಮಾಡಲು ಹೊರಟಿದ್ದಾರೆ. ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ. ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ದೇಶದ ಸಂಪತ್ತು ಲೂಟಿ ಮಾಡಿ ಅವರ ದೇಶಕ್ಕೆ ತೆಗೆದುಕೊಂಡು ಹೋದರು. ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬರುವ ಮುನ್ನ ವಿಶ್ವ ಜಿಡಿಪಿಯಲ್ಲಿ ಅವರ ಕೊಡುಗೆ ಶೇ.2ರಷ್ಟಿತ್ತು. ಅವರು ನಮ್ಮ ದೇಶ ಬಿಡುವಾಗ ಶೇ.10ಕ್ಕೆ ಏರಿಕೆಯಾಗಿತ್ತು. ಅವರು ಎಷ್ಟು ಕೊಳ್ಳೆ ಹೊಡೆದಿದ್ದಾರೆ ನೋಡಿ. ಗರಿಷ್ಠಮಟ್ಟದಲ್ಲಿದ್ದ ಜಿಡಿಪಿ ನಂತರ ಕೆಳ ಮಟ್ಟಕ್ಕೆ ಕುಸಿಯಿತು. ಅಂದು ಶ್ರೀಮಂತ ದೇಶವಾಗಿದ್ದ ಭಾರತ, ಬಡ ರಾಷ್ಟ್ರವಾಗಲು ಬ್ರಿಟೀಷರೇ ಕಾರಣ. ಇಂದು ದೇಶ ಮತ್ತೆ ಬಡರಾಷ್ಟ್ರವಾಗುತ್ತಿರುವುದಕ್ಕೆ ಕಾರಣ ಬಿಜೆಪಿ. ಹೀಗಾಗಿ ದೇಶವನ್ನು ರಕ್ಷಿಸಲು ಬ್ರಿಟೀಷರ ವಿರುದ್ಧ ಮಾಡಿದ ಹೋರಾಟದಂತೆ, ದೇಸ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಬಿಜೆಪಿಯವರ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಂತಹ ಪ್ರಮುಖ ದಿನಗಳಂದು ನಾವೆಲ್ಲರೂ ಕಾಯಾ ವಾಚ ಮನಸ ದೇಶಕ್ಕಾಗಿ ಗಾಂಧಿಜಿ ಅವರಂತೆ ತ್ಯಾಗ ಬಲಿದಾನ ಮಾಡಲು ಸಾಧ್ಯವಾಗದಿದ್ದರೂ ಸ್ವಲ್ಪ ಪ್ರಮಾಣದ ತ್ಯಾಗ ಬಲಿದಾನ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಿದೆ. ದೇಶದ ಎಲ್ಲ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಒಟ್ಟಾಗಿ ಸೇರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಬಿಜೆಪಿಯನ್ನು ಖಂಡಿತವಾಗಿಯೂ ತೊಲಗಿಸಬಹುದು ಎಂದರು.