ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ತಂದು ಕೊಟ್ಟಿದ್ದಾರೆ ನೀರಜ್ ಚೋಪ್ರಾ. ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಬರೋಬ್ಬರಿ 87.65 ಮೀ ದೂರ ಎಸೆಯುವ ಮೂಲಕ ಚೋಪ್ರಾ ಇತಿಹಾಸ ಸೃಷ್ಟಿಸಿದ್ದಾರೆ.
Did not even look at his throw and celebrated. ye wala Confidence and swag chahiye 🚩#NeerajChopra #Tokyo2020pic.twitter.com/Q8YrOrEPCw
— Javed (@JoySRKian_2) August 7, 2021
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಅರ್ಹತಾ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆಯುವ ಮೂಲಕ ಮೊದಲಿಗರಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದರು. ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲಿಯೇ 87.03 ಮೀಟರ್ ಎಸೆದಿದ್ದರು. ಎರಡನೇ ಪ್ರಯತ್ನದಲ್ಲಿ 87.65 ಮೀ ದೂರ ಎಸೆದು ದಾಖಲೆ ನಿರ್ಮಿಸಿದರು. ಅಂತಿಮ ಪ್ರಯತ್ನದಲ್ಲಿ 75 ಮೀಟರ್ ಮಾತ್ರ ಎಸೆದರು. ಆ ಮೂಲಕ ಅತಿ ದೂರ ಎಸೆದು ಮೊದಲಿಗರಾಗಿದ್ದಾರೆ.
The national flag is high!
— U.C.C.👍 Reservation❌ (@akpvt_) August 7, 2021
National anthem in Olympics!#NeerajChopra has done it.
Gold for India!
Neeraj Chopra Thank you for making 135 crores proud! pic.twitter.com/3AGY7QDGwn
ಚೆಕ್ ರಿಪಬ್ಲಿಕ್‌ನ ವಿ.ವೆಸ್ಲಿ 86.67 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರೆ, ಜರ್ಮನಿಯ ಜೆ.ವೆಬರ್ 85.30 ಎಸೆದು ಕಂಚು ತನ್ನದಾಗಿಸಿಕೊಂಡರು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನ ಗೆದ್ದದ್ದೆ ಭಾರತಕ್ಕೆ ಕಡೆಯ ಚಿನ್ನವಾಗಿತ್ತು.
ಭಾರತ ಇದುವರೆಗೂ ಒಲಿಂಪಿಕ್ಸ್‌ನಲ್ಲಿ 9 ಚಿನ್ನ, 9ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದಿದೆ.
THE THROW THAT WON INDIA #GOLD!!! 🔥
— Pratap Simha (@mepratap) August 7, 2021
Congratulations & Thank you @Neeraj_chopra1 #NeerajChopra #Cheer4India 🇮🇳 #Tokyo2020 #Olympics pic.twitter.com/u01vFzauhx
ಭಾರತೀಯ ಸೇನೆಯ ನಿಯೋಜಿತ ಅಧಿಕಾರಿ
ನೀರಜ್ ಚೋಪ್ರಾ ಭಾರತೀಯ ಸೇನೆಗೆ ಸೇರಿದ್ದಾರೆ, ರೈತನಾಗಿರುವ ತಂದೆಗೆ ಆರ್ಥಿಕ ಸಹಾಯ ಮಾಡಿದ ತೃಪ್ತಿ ಅವರಿಗಿದೆ. ಅವರನ್ನು ಭಾರತೀಯ ಸೇನೆಯು ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಿಸಿದೆ. ವಿಶ್ವದ ಅತ್ಯಂತ ಪ್ರಸಿದ್ಧ ತರಬೇತುದಾರಾದ ಯುವೆ ಹೋನ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.

ಟೋಕಿಯೋದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ನೀರಜ್ ಚೋಪ್ರಾ ಸಾಧನೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ನೀರಜ್ ಅಸಾಧಾರಣವಾಗಿ ಪ್ರದರ್ಶನ ನೀಡಿದ್ದಾರೆ. ಚಿನ್ನ ಗೆದ್ದ ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
From Khandra Village, home of #NeerajChopra
— Ujjawal Sharma (@SharmaJi220) August 7, 2021
Gold for India 🇮🇳
Finally, the national anthem in Tokyo. 🎶🇮🇳
नीरज_चोपड़ा 🔥💯 pic.twitter.com/RWRfGhoBD1