ಭಾರತೀಯ ಪುರುಷರ ಹಾಕಿ ತಂಡ ಇತಿಹಾಸ ಸೃಷ್ಟಿಸಿದೆ. 41 ವರ್ಷಗಳ ಬಳಿಕ ತಂಡವು ಹಾಕಿ ಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದೆ. ಭಾರತ ತಂಡ ಒಲಂಪಿಕ್ಸ್ನಲ್ಲಿ 1980ರಲ್ಲಿ ಕೊನೆಯ ಪದಕ ಮಾಸ್ಕೋದಲ್ಲಿ ಪಡೆದಿತ್ತು. ಅಂದು ವಾಸುದೇವನ್ ಭಾಸ್ಕರನ್ ನಾಯಕತ್ವದಲ್ಲಿ ಚಿನ್ನ ಗೆದ್ದಿತ್ತು.

ಕಂಚಿನ ಪದಕದ ಪಂದ್ಯದಲ್ಲಿ ಟೀಂ ಇಂಡಿಯಾ ಜರ್ಮನಿಯನ್ನು 5-4ರಿಂದ ಸೋಲಿಸಿತು. ಎರಡನೇ ಕ್ವಾರ್ಟರ್ ನಲ್ಲಿ 3-1 ಹಿನ್ನಡೆಯಲ್ಲಿದ್ದ ಭಾರತ, ಆಟ ಮರಳಿ ಪಡೆಯಲು ಸತತ ನಾಲ್ಕು ಗೋಲುಗಳನ್ನು ಗಳಿಸಿತು. ಭಾರತಕ್ಕಾಗಿ ಸಿಮ್ರಂಜಿತ್ ಸಿಂಗ್ (17 ಮತ್ತು 34 ನೇ), ಹಾರ್ದಿಕ್ ಸಿಂಗ್ (27 ನೇ), ಹರ್ಮನ್ಪ್ರೀತ್ ಸಿಂಗ್ (29 ನೇ) ಮತ್ತು ರೂಪಿಂದರ್ ಪಾಲ್ ಸಿಂಗ್ (31 ನೇ) ಗೋಲು ಗಳಿಸಿದರು.

ಆದಾಗ್ಯೂ, ನಾಲ್ಕನೇ ಕ್ವಾರ್ಟರ್ ನಲ್ಲಿ ಜರ್ಮನಿ ಮತ್ತೊಂದು ಗೋಲು ಗಳಿಸಿತು. ಈ ಮೂಲಕ ಜರ್ಮನಿ ಸ್ಕೋರ್ 5-4 ಆಯಿತು. ಇದಾದ ಮೇಲೆ ಭಾರತದ ಕ್ರೀಡಾಪಟುಗಳು ಜರ್ಮನಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಕೊನೆಗೆ ವಿಜಯಿಭವರಾಗಿ ಭಾರತಕ್ಕೆ ಕಂಚಿನ ಪದಕದೊಂದಿಗೆ ಮರಳಲಿದ್ದಾರೆ.