ರ‍್ಯಾಪರ್ ಹನಿ ಸಿಂಗ್ ಅವರ ವೈಯಕ್ತಿಕ ಬದುಕು ಇತ್ತೀಚಿಗೆ ಸುದ್ದಿಯಲ್ಲಿದೆ. ಯೋ ಯೋ ಹನಿ ಸಿಂಗ್ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್ ಅವರು ಕೌಟುಂಬಿಕ ದೌರ್ಜನ್ಯ ಕುರಿತ ಗಂಭೀರ ಆರೋಪ ಮಾಡಿದ್ದಾರೆ. ಹನಿ ಸಿಂಗ್ ಹಲವಾರು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ರಾಪರ್ ಪತ್ನಿ ಆರೋಪಿಸಿದ್ದಾರೆ.
“ಬ್ರೌನ್ ರಂಗ್ ದೇ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಹನಿ ಸಿಂಗ್ ಹುಡುಗಿಯ ಜೊತೆ ಇದ್ದಾಗ ರೆಡ್ ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿ ಬಿದ್ದಿದ್ದರು. ಆ ವೇಳೆ ಹನಿ ಸಿಂಗ್ ಮದ್ಯದ ಬಾಟಲಿ ನನ್ನ ಮೇಲೆ ಎಸೆದಿದ್ದ ಎಂದು ಶಾಲಿನಿ ತಲ್ವಾರ್ ಆರೋಪಿಸಿದ್ದಾರೆ. ಶಾಲಿನಿ ಕೌಟುಂಬಿಕ ದೌರ್ಜನ್ಯ ಕುರಿತು ದೂರು ದಾಖಲಿಸಿದ್ದು, ಅತ್ತೆ ಭೂಪಿಂದರ್ ಕೌರ್, ಮಾವ ಸರಬ್ಜಿತ್ ಸಿಂಗ್ ಮತ್ತು ಸೊಸೆ ಸ್ನೇಹಾ ಸಿಂಗ್ ಅವರ ಹೆಸರನ್ನೂ ದೂರನ್ನು ದಾಖಲಿಸಿದ್ದಾರೆ. ಅರ್ಜಿಯಲ್ಲಿ ಶಾಲಿನಿ ತನ್ನ ಅತ್ತೆ ಮಾವ ಮಾಡಿರುವ ದೌರ್ಜನ್ಯ ಕುರಿತು ವಿವರವಾಗಿ ತಿಳಿಸಿದ್ದಾರೆ.

10 ಕೋಟಿ ಪರಿಹಾರ ಕೋರಿದ ಯೋ ಯೋ ಹನಿಸಿಂಗ್ ಪತ್ನಿ
ಶಾಲಿನಿ “ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ’ ಅಡಿಯಲ್ಲಿ ಹನಿ ಸಿಂಗ್ ಅವರಿಂದ 10 ಕೋಟಿ ರೂಪಾಯಿ ಪರಿಹಾರವನ್ನು ಕೋರಿದ್ದಾರೆ. ಹನಿ ಸಿಂಗ್ ದೆಹಲಿಯಲ್ಲಿ 5 ಲಕ್ಷ ಮನೆ ಬಾಡಿಗೆಯನ್ನು ನೀಡಬೇಕು ಎಂದು ಒತ್ತಾಯಸಿದ್ದಾರೆ.

120 ಪುಟಗಳ ಅರ್ಜಿಯಲ್ಲಿ ಅನೇಕ ವಿಷಯಗಳು ಬಹಿರಂಗ
ತನ್ನ 120 ಪುಟಗಳ ಅರ್ಜಿಯಲ್ಲಿ ಶಾಲಿನಿ ತಾನು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಘಟನೆಯನ್ನು ಉಲ್ಲೇಖಿಸಿದ್ದಾಳೆ. ತಮ್ಮ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಹನಿ ಸಿಂಗ್ ಗಾಬರಿಗೊಂಡರು. ನಾನೇ ಫೋಟೋಗಳನ್ನು ಲೀಕ್ ಮಾಡಿದ್ದೇನೆ ಎಂದು ಆರೋಪಿಸಿ ನನ್ನನ್ನು ಕ್ರೂರವಾಗಿ ಥಳಿಸಿದರು ಎಂದು ಆರೋಪಿಸಿದ್ದಾರೆ. ಹನಿ ಸಿಂಗ್ ಪ್ರಾಣಿಗಳನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಾರೆಯೋ ಅಷ್ಟು ಕ್ರೂರವಾಗಿ ನನ್ನನ್ನು ನಡೆಸಿಕೊಂಡಿದ್ದಾರೆ ಎಂದು ಶಾಲಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

25 ದಿನಗಳಲ್ಲಿ ಹನಿ ಸಿಂಗ್ ಉತ್ತರ ಕೇಳಿದ ಕೋರ್ಟ್
ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ ನಂತರ, ಹನಿ ಸಿಂಗ್ ಅವರಿಗೆ ಆಗಸ್ಟ್ 28ರೊಳಗೆ ಉತ್ತರ ಸಲ್ಲಿಸುವಂತೆ ದೆಹಲಿ ಕೋರ್ಟ್ ನೋಟಿಸ್ ನೀಡಿದೆ. ಏತನ್ಮಧ್ಯೆ, ನ್ಯಾಯಾಲಯವು ಶಾಲಿನಿಯ ಪರವಾಗಿ ಮಧ್ಯಂತರ ಆದೇಶವನ್ನು ನೀಡಿದೆ ಮತ್ತು ಹನಿ ಸಿಂಗ್ ಅವರ ಜಂಟಿ ಒಡೆತನದ ಆಸ್ತಿ ಪ್ರಕರಣವನ್ನು ಇತ್ಯರ್ಥಗೊಳಿಸದಂತೆ ನಿರ್ಬಂಧಿಸಿದೆ.