ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಕೆಲವು ಮಹಿಳಾ ಆಟಗಾರ್ತಿಯರು ತಮ್ಮ ಆಟದ ಜೊತೆಗೆ ತಮ್ಮ ಸೌಂದರ್ಯದಿಂದಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಾರೆ. ಆದರೆ, ಒಲಿಂಪಿಕ್ಸ್‌ನ ಭಾಗವಾಗಿರದ ಕೆಲವರನ್ನು ಸೋಶಿಯಲ್‌ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.
ಅಂತಹ ಹುಡುಗಿಯೊಬ್ಬಳಲ್ಲಿ ತ್ಸುಯು ಕೂಡ ಒಬ್ಬಳು. ಇತ್ತೀಚಿಗೆ ತ್ಸುಯು ಫೋಟೋಸ್ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಈಕೆ ಜಪಾನ್‌ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಆಟಗಾರ್ತಿ ಎಂದು ಹಲವರು ನಂಬಿದ್ದಾರೆ. ಕೆಲವರು ಈಕೆ ಚೀನಾ, ತೈವಾನ್ ದೇಶದವಳು ಎನ್ನುತ್ತಿದ್ದಾರೆ. ವಾಸ್ತವವನ್ನು ನೋಡುವುದಾದರೆ, ತ್ಸುಯು ಕೊರಿಯಾ ದೇಶದವಳು.
2M VIEWS FOR THE ARCHERY GODDESS TZUYU 🔥pic.twitter.com/d7ky3Pkpcv
— tzuyu supporter (@prodigytzu) August 1, 2021

ತ್ಸುಯುವಿನ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅವಳು ಬಿಲ್ಲುಗಾರಿಕೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತದೆ. ಆದರೆ ತ್ಸುಯುಗು ಒಲಿಂಪಿಕ್ಸ್‌ಗೂ ಯಾವುದೇ ಸಂಬಂಧವಿಲ್ಲ.
ಈ ವೈರಲ್ ವಿಡಿಯೋಗಳು ತ್ಸುಯು ಐಎಸ್‌ಎಸಿಯ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ತೆಗೆದಿರುವಂತದ್ದು . ತ್ಸುಯು ಯಾವಾಗಲೂ ಐಡಲ್ ಸ್ಟಾರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಾಳೆ. ಪ್ರತಿಯೊಂದು ಸ್ಪರ್ಧೆಯಲ್ಲೂ ತನ್ನ ಬಿಲ್ಲುಗಾರಿಕಾ ಕೌಶಲ್ಯ ಮತ್ತು ಸೌಂದರ್ಯದಿಂದಾಗಿ ವೈರಲ್ ಆಗುತ್ತಾಳೆ.
tzuyu smiling sweetly before shooting her arrow pic.twitter.com/EVKJURshs5
— random tzuyu pics (@CTYFILM) August 2, 2021
Tzuyu is a master of hairflips ever since~#TZUYU #쯔위 #子瑜 #ツウィ #จื่อวี #twice @JYPETWICE https://t.co/AgkdsL6sG7 pic.twitter.com/bNeI0IN5PC
— Dreamer (@Dreamer_Tzu) August 2, 2021
ತ್ಸುಯು ಮೂಲತ್ಹ ಹಾಡುಗಾರ್ತಿ. ತನ್ನ ಹಾಡು ಹಾಗೂ ನೃತ್ಯದಿಂದಾಗಿ ಸೌತ್ ಕೊರಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾಳೆ.