ಚೆನ್ನೈ : ನಟಿ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಯಶಿಕಾ ಅಪಘಾತ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಜುಲೈ 25 ರಂದು ಮಹಾಬಲಿಪುರಂ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ನಟಿ ಯಶಿಕಾ ಆನಂದ್ ಅವರು ಇಷ್ಟುದಿನಗಳ ಕಾಲ ಐಸಿಯುನಲ್ಲಿದ್ದರು. ಇಂದು ಅವರ ಹುಟ್ಟಿದ ದಿನ. ಈ ದಿನವೇ ತಾನು ಬದುಕಿರೋದಕ್ಕೆ ಜೀವನಪರ್ಯಂತ ಪಶ್ಚಾತ್ತಾಪದರುವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಶಿಕಾ ಯಶಿಕಾ
ಅಪಘಾತ ನಡೆದ ದುರಂತದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಯಶಿಕಾ, “ನನಗೆ ಈಗ ಏನಾಗುತ್ತಿದೆ ಎಂದು ಹೇಳಲಾಗುತ್ತಿಲ್ಲ. ನಾನು ಬದುಕಿರುವುದಕ್ಕೆ ಜೀವನಪರ್ಯಂತ ಪಶ್ಚಾತ್ತಾಪ ಪಡುವೆ. ನನ್ನನ್ನು ಅಪಘಾತದಿಂದ ಬದುಕಿಸಿದೆ ಎಂದು ದೇವರಿಗೆ ಧನ್ಯವಾದ ಹೇಳಲಾ ಅಥವಾ ನನ್ನ ಗೆಳತಿಯನ್ನು ಕರೆದುಕೊಂಡು ಹೋದೆ ಅಂತ ದ್ವೇಷಿಸಲಾ? ಒಂದೂ ಅರ್ಥವಾಗುತ್ತಿಲ್ಲ. ಅಪಘಾತದಲ್ಲಿ ಸಾವನ್ನಪ್ಪಿದ ನನ್ನ ಗೆಳತಿ ಪಾವನಿಯನ್ನು ತುಂಬ ಮಿಸ್ ಮಾಡಿಕೊಳ್ತೀನಿ. ನನ್ನನ್ನು ನೀನು ಕ್ಷಮಿಸುತ್ತೀಯಾ ಎಂದು ನನಗೆ ಗೊತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸು. ನಿನ್ನ ಕುಟುಂಬವನ್ನು ನಾನು ತುಂಬ ಭಯಂಕರ ಸ್ಥಿತಿಗೆ ನೂಕಿದೆ.” ಎಂದು ಯಶಿಕಾ ಆನಂದ್ ಬರೆದುಕೊಂಡಿದ್ದಾರೆ.
ಪಾವನಿ
ಪ್ರತಿಕ್ಷಣ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುವೆ. ಬದುಕಿರುವುದಕ್ಕೆ ಕೊನೆಯ ತನಕ ಪಶ್ಚಾತ್ತಾಪದಲ್ಲಿ ಇರುವೆ. ನಿನ್ನ ಆತ್ನಕ್ಕೆ ಶಾಂತಿ ಸಿಗಲಿ, ಆದಷ್ಟು ಬೇಗ ನನ್ನ ಹತ್ತಿರ ಬಾ ಎಂದು ಪ್ರಾರ್ಥಿಸುವೆ. ನಿನ್ನ ಕುಟುಂಬ ಕೂಡ ನನ್ನನ್ನು ಕ್ಷಮಿಸುವೆ. ನಿನ್ನ ನೆನಪುಗಳನ್ನು ಸದಾ ಸಂಭ್ರಮಿಸುವೆ” ಎಂದು ಯಶಿಕಾ ಆನಂದ್ ಹೇಳಿದ್ದಾರೆ.

”ಕಾನೂನು ಎಲ್ಲರಿಗೂ ಒಂದೇ. ನಾವು ಕುಡಿದು ಗಾಡಿ ಓಡಿಸುತ್ತಿರಲಿಲ್ಲ ಎಂದು ಪೊಲೀಸರು ಅಧಿಕೃತವಾಗಿ ಹೇಳಿದ್ದಾರೆ. ಹೀಗಿದ್ದಾಗ್ಯೂ ಕೆಲವರು ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅನೇಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ತುಂಬ ಸೂಕ್ಷ್ಮವಾದ ವಿಷಯ. ನನ್ನ ಬಲಗಾಲು ಫ್ರ್ಯಾಕ್ಚರ್ ಆಗಿದೆ. ಸರ್ಜರಿ ನಂತರ ನಾನು ರೆಸ್ಟ್ ಮಾಡುತ್ತಿದ್ದೇನೆ. ಇನ್ನು 5 ತಿಂಗಳುಗಳ ಕಾಲ ನನಗೆ ನಡೆಯಲು, ನಿಂತುಕೊಳ್ಳಲು ಆಗಲ್ಲ. ಪೂರ್ತಿ ದಿನ ನಾನು ಹಾಸಿಗೆ ಮೇಲೆ ಇರುವೆ. ಅದೇ ಹಾಸಿಗೆ ಮೇಲೆ ಮೂತ್ರ-ಮಲ ವಿಸರ್ಜನೆ ಮಾಡಿಕೊಳ್ಳಬೇಕು. ನನಗೆ ಬಲ ಹಾಗೂ ಎಡಕ್ಕೂ ತಿರುಗಲು ಆಗಲ್ಲ” ಎಂದು ಯಶಿಕಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
Beauty in Blue.. ✨ #YashikaAannand @iamyashikaanand @teamaimpr pic.twitter.com/kI26Q6a3xH
— Ramesh Bala (@rameshlaus) January 17, 2021