ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವವರ ಪಟ್ಟಿ ಬಿಡುಗಡೆಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿರುವ ಬಿಸಿ ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನಾಳೆ ಮಧ್ಯಾಹ್ನ 2.15 ಕ್ಕೆ ಸಚಿವನಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ.ಎಂದಿನಂತೆ ನಿಮ್ಮ ಸಹಕಾರ ಕ್ಷೇತ್ರದ ಜನತೆಯ ಆಶೀರ್ವಾದವಿರಲಿ ಎಂದು ತಿಳಿಸಿದ್ದಾರೆ.
ಸಂಪುಟ ಸಚಿವರಾಗಿ ನಾಳೆ ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ವಿಜಯೇಂದ್ರ, ಡಾಕ್ಟರ್ ಸಿ.ಎಸ್ ಅಶ್ವಥ್ ನಾರಾಯಣ, ಶ್ರೀರಾಮುಲು, ಸೋಮಣ್ಣ, ಮಾಧುಸ್ವಾಮಿ, ಬಾಲಚಂದ್ರ ಜಾರಕಿಹೊಳಿ, ಆರ್ ಅಶೋಕ್, ಕೆ.ಎಸ್ ಈಶ್ವರಪ್ಪ, ರಾಜೀವ್, ಅರವಿಂದ ಲಿಂಬಾವಳಿ, ರೇಣುಕಾಚಾರ್ಯ,ರಾಜೂಗೌಡ, ಉಮೇಶ್ ಕತ್ತಿ,ಸೋಮಶೇಖರ್,ಆನಂದ್ ಸಿಂಗ್,ಮುನಿರತ್ನ, ಮಹೇಶ್ ಕುಮಟಳ್ಳಿ, ಮುರುಗೇಶ್ ನಿರಾಣಿ, ಶಿವರಾಮ್ ಹೆಬ್ಬಾರ್, ಗೋಪಾಲಯ್ಯ, ಎಂ ಟಿ ಬಿ ನಾಗರಾಜ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಟ್ಟು 24 ಜನರು ನಾಳೆ ಮಧ್ಯಾಹ್ನ ೨.೧೫ಕ್ಕೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೆಲ್ಲಾರಿಗೂ ಸಿಎಂ ಬಸವರಾಜ್ ಬೊಮ್ಮಾಯಿ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ.