ಟೋಕಿಯೋ(ಅ.3) ; ಭಾರತ ಹಾಗೂ ಬೆಲ್ಜಿಯಂ ನಡುವೆ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಹಾಕಿ ತಂಡ ಬೆಲ್ಜಿಯಂ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಸೋಲು ಕಂಡಿತು. ಒಲಪಿಂಕ್ಸ್‌ನಲ್ಲಿ 41 ವರ್ಷದ ಬಳಿಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಭಾರತ ಹಾಗೂ ಬೆಲ್ಜಿಯಂ ತಂಡಗಳ ನಡುವಿನ ಜಿದ್ದಾಜಿದ್ದಿನ ಕಾದಾಟದಲ್ಲಿ ಭಾರತಕ್ಕೆ ಸೋಲಾಗಿದ್ದು ಬೆಲ್ಜಿಯಂ ತಂಡ ಮೇಲುಗೈಯನ್ನು ಕಂಡಿದೆ.

ಟೀಮ್ ಇಂಡಿಯಾ ಮೊದಲ ಕ್ವಾಟರ್ ನಲ್ಲಿ 2-1 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಎರಡು ತಂಡಗಳು ಮೊದಲಿನಿಂದಲೇ ಆಕ್ರಮಣಕಾರಿ ಪ್ರದರ್ಶನವನ್ನು ನೀಡಿದವು. ಭಾರತದ ಡಿಫೆನ್ಸ್ ಮುಂದೆ ಮೊದಲ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಆಟ ನಡೆಯಲಿಲ್ಲ.
Let's do it one more time. 💪
— Hockey India (@TheHockeyIndia) August 3, 2021
Team India, #HaiTayyar!
🇮🇳 0:0 🇧🇪#INDvBEL #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/pO9GhyJakQ
ಎರಡನೇ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ತಂಡ ಒಂದು ನಿಮಿಷ ನಾಲ್ಕು ಸೆಕೆಂಡುಗಳಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದು ಗೋಲನ್ನ ದಾಖಲಿಸಿತ್ತು. ಮೂರನೇ ಕ್ವಾರ್ಟರ್ ವರೆಗೆ ಪಂದ್ಯ 2-2 ರಿಂದ ಸಮಬಲದಿಂದ ಕೂಡಿತ್ತು. ನಂತರ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಬೆಲ್ಜಿಯಂ ಅಂತಿಮ 15 ನಿಮಿಷಗಳಲ್ಲಿ ಒಟ್ಟು ಮೂರು ಗೋಲು ಬಾರಿಸುವಲ್ಲಿ ಸಫಲವಾಯಿತು. ಅಂತಿಮವಾಗಿ ಭಾರತ 2-5 ಅಂತರದಲ್ಲಿ ಸೋಲನ್ನು ಅನುಭವಿಸಿತು.
Wins and losses are a part of life. Our Men’s Hockey Team at #Tokyo2020 gave their best and that is what counts. Wishing the Team the very best for the next match and their future endeavours. India is proud of our players.
— Narendra Modi (@narendramodi) August 3, 2021
ಪಂದ್ಯವನ್ನುಪ್ರಧಾನಿ ನರೇಂದ್ರ ಮೋದಿಯವರು ವೀಕ್ಷಿಸಿದರು. ಪಂದ್ಯ ಮುಗಿದ ನಂತರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಸೋಲು ಗೆಲುವು ಜೀವನ ಭಾಗ. ಭಾರತ ತಂಡದ ಮೇಲೆ ನಮಗೆ ಗರ್ವವಿದೆ ಎಂದು ಟ್ವೀಟ್ ಮಾಡಿದ್ದಾರೆ.