ದಾವಣಗೆರೆ: ಕೊರೊನಾ ನಿಯಂತ್ರಿಸಲು ಜಿಲ್ಲೆಯಾದ್ಯಂತ ಪ್ರತಿದಿನ ರಾತ್ರಿ 10ಗಂಟೆಯಿಂದ ಆಗಸ್ಟ್ 16 ರ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂವನ್ನು ಜಿಲ್ಲಾದಂಡಾಧಿಕಾರಿ ಮಹಾಂತೇಶ ಬೀಳಗಿ ಜಾರಿಗೊಳಿಸಿದ್ದಾರೆ.
ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಅವಧಿಯಲ್ಲಿ ಅನುಮತಿಸಿದ ಚಟುವಟಿಕೆಗೆ ಮಾತ್ರಅವಕಾಶವಿರುತ್ತದೆ. ಜುಲೈ 31ರ ಸರ್ಕಾರದ ಆದೇಶ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸಂಪರ್ಕ ಆದೇಶಗಳು ಹಾಗೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಿಂದ ಬರುವ ವ್ಯಕ್ತಿಗಳವಿಶೇಷ ಕಣ್ಗಾವಲು ಕ್ರಮಗಳಿಗೆ ಸಂಬಂಧಿಸಿದಂತೆಆದೇಶಗಳು ಮುಂದಿನ ಆದೇಶದವರೆಗೆಜಾರಿಯಲ್ಲಿರುತ್ತವೆ.
ಅದೇ ರೀತಿ ಕೋವಿಡ್-19 ಸಂಭಾವ್ಯ ಮೂರನೇಅಲೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ತಕ್ಷಣದಿಂದಜಾರಿಗೆ ಬರುವಂತೆ ಆ. 31ವರೆಗೆ ಅಥವಾಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲಮುಂಜರಾಯಿ ದೇವಾಲಯಗಳು ಮತ್ತು ಖಾಸಗಿದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದ್ದು, ಶನಿವಾರ ಮತ್ತು ಭಾನುವಾರಗಳಂದು ಭಕ್ತಾದಿಗಳ ದೇಗುಲಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.