ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪರಾಭವಗೊಂಡಿದ್ದಾರೆ. ಮೂಲಕ ಗೋಲ್ಡ್ ಮೆಡಲ್ ಗೆಲ್ಲುವ ಭಾರತದ ಕನಸು ಕಮರಿದೆ. ಭಾರಿ ಕುತೂಹಲ ಮೂಡಿಸಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ ಸಿಂಧು ಸೋತಿದ್ದಾರೆ.

40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ತೈ 21-18, 21-12ರಲ್ಲಿ ಸಿಂಧು ಅವರನ್ನು ಸೋಲಿಸಿದರು. ಮೊದಲ ಪಂದ್ಯದಲ್ಲಿ 4 ಅಂಕಗಳ ಮುನ್ನಡೆ ಹೊಂದಿದ್ದ ಸಿಂಧು 18-21ರಲ್ಲಿ ಸೋತರು. ಇಬ್ಬರೂ ಆಟಗಾರರು 18-18ರಲ್ಲಿ ಸಮನಾದ ಅಂಕದಲ್ಲಿದ್ದರು. ಆದರೆ ತೈ ಸತತ ಮೂರು ಅಂಕಗಳನ್ನು ಪಡೆಯುವ ಮೂಲಕ ಆಟವನ್ನು ತನ್ನದಾಗಿಸಿಕೊಂಡರು.
ಸಿಂಧು ಈಗ ಕಂಚಿನ ಪದಕಕ್ಕಾಗಿ ಚೀನಾದ ಕ್ಸಿಯಾವೊ ಬಿಂಗ್ ಹೆ ಅವರನ್ನು ಎದುರಿಸಲಿದ್ದಾರೆ. ಪಂದ್ಯವು ಭಾನುವಾರ ಸಂಜೆ 5 ಗಂಟೆಗೆ ನಡೆಯಲಿದೆ.