ವಿಜಯಪುರ: ದತ್ತು ಪುತ್ರಿಯ ಮದುವೆಯನ್ನ ಮುಸ್ಲಿಂ ತಂದೆ ಹಿಂದು ಸಂಪ್ರದಾಯದಂತೆ ನೆರವೇರಿಸುವ ಮೂಲಕ ಭಾವೈಕತ್ಯೆಯ ಸಂದೇಶ ರವಾನಿಸಿದ್ದಾರೆ. ಶುಕ್ರವಾರ ವಿಜಯಪುರದ ಆಲಮೇಲ ಪಟ್ಟಣ ಈ ವಿಶೇಷ ಮದುವೆಗೆ ಸಾಕ್ಷಿ ಆಯ್ತು.
10 ವರ್ಷಗಳ ಹಿಂದೆ ಪಟ್ಟಣದ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಎಂಬವರು ಪೂಜಾ ಬಾಲಕಿಯ ಜವಾಬ್ದಾರಿಯನ್ನು ತೆಗೆದುಕೊಂಡು ಮಗಳಂತೆ ಸಾಕಿದ್ದರು. ಪೂಜಾಳಿಗೆ ಅವಳ ಧರ್ಮದ ಹುಡುಗನನ್ನು ಹುಡುಕಿ ಮನೆಯ ಮುಂದೆ ಚಪ್ಪರ ಹಾಕಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ. ಮಹಿಬೂಬು ಮಸಳಿ ಅವರೇ ತಂದೆಯ ಸ್ಥಾನದಲ್ಲಿ ನಿಂತು ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಗಳನ್ನ ಧಾರೆ ಎರೆದಿದ್ದಾರೆ.
ಪೂಜಾ ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡು ಆಲಮೇಲದ ಅಜ್ಜಿಯ ಆಶ್ರಯದಲ್ಲಿದ್ದಳು. ಆದ್ರೆ 10 ವರ್ಷಗಳ ಹಿಂದೆ ಹಿಂದೆ ಒಬ್ಬ ಅಜ್ಜಿ ಸಹ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅಂದು ಅನಾಥಳಾಗಿದ್ದ ಪೂಜಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಇದೀಗ ಬಸವನ ಬಾಗೇವಾಡಿ ತಾಲೂಕಿನ ಸಾರವಾಡ ಗ್ರಾಮದ ಶಂಕರ್ ಎಂಬಾತನ ಜೊತೆ ಪೂಜಾ ಮದುವೆ ನಡೆದಿದೆ.