ನವದೆಹಲಿ, (ಜುಲೈ 31)- ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಕಳೆದ ವರ್ಷ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ನೀಡಿದ್ದು, ಇನ್ನು 11 ಸಾವಿರ ಕೋಟಿ ರೂ. ಗಳಷ್ಟು ಪರಿಹಾರ ಬಿಡುಗಡೆಯಾಗಬೇಕಿದೆ. ಈ ಪರಿಹಾರದ ಬಿಡುಗಡೆ ಕುರಿತು ಚರ್ಚಿಸಿದರು.
Chief Minister @BSBommai met Union Finance Minister Smt @nsitharaman in New Delhi today and discussed about GST compensation, Centrally Sponsored Schemes (CSS) and other important matters pertaining to the state.@FinMinIndia @nsitharamanoffc pic.twitter.com/fvXsSaZ6pv
— CM of Karnataka (@CMofKarnataka) July 31, 2021
ಈ ವರ್ಷ ಸುಮಾರು 18 ಸಾವಿರ ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಅಡಚಣೆ ಎದುರಾಗಿರುವುದರಿಂದ ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇದಲ್ಲದೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆಯ ಕುರಿತೂ ಸಹ ಕೇಂದ್ರ ಸಚಿವರ ಗಮನಸೆಳೆದರು.